ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ 38 ಜನರು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಗುಚಿ ಬಿದ್ದಿದೆ.
ಜಿಲ್ಲೆಯ ಪವಿತ್ರ ಸಂಗಮಂ ಘಾಟ್ ಬಳಿ ಈ ದುರಂತ ನಡೆದಿದೆ. ಬೋಟ್ ನಲ್ಲಿದ್ದ 11 ಜನರು ಕಣ್ಮರೆಯಾಗಿದ್ದು, ಇದೂವರೆಗೂ ಕೇವಲ 15 ಮೃತ ದೇಹಗಳು ಮಾತ್ರ ಪತ್ತೆಯಾಗಿವೆ. ಇನ್ನೂ 12 ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ ಪತ್ರಿಕೆಗಳು ವರದಿ ಮಾಡಿವೆ. ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ವ್ಯಸ್ಥವಾಗಿದ್ದಾರೆ. ಆದರೆ ಸಾವು- ನೋವಿನ ಬಗ್ಗೆ ನಿಖರ ಅಂಕಿ ಅಂಶಗಳು ಇದೂವರೆಗೂ ಲಭ್ಯವಾಗಿಲ್ಲ.
Advertisement
ದುರಂತಕ್ಕೆ ಕಾರಣವೇನು?: ಇಂದು ಕಾರ್ತಿಕ ಮಾಸದ ಕೊನೆಯ ಭಾನುವಾರ. ಹಾಗಾಗಿ ಜನರು ಪವಿತ್ರ ಸಂಗಮಂ ಘಾಟ್ ತೆರಳಿದ್ದಾರೆ. ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
Advertisement
ಪವಿತ್ರ ಸಂಗಮಂ ಇದೊಂದು ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಅನೇಕ ಪ್ರವಾಸಿಗರು ಪ್ರವಾಸಿ ಸ್ಥಳವನ್ನು ನೋಡಲು ಹೋಗುತ್ತಾರೆ. ಆದರೆ ಇಂದು ಕಾರ್ತಿಕ ಮಾಸ ಕೊನೆಯ ಭಾನುವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಇದೇ ಸ್ಥಳದಲ್ಲಿ ಗೋದಾವರಿ ಮತು ಕೃಷ್ಣಾ ನದಿಯ ಸಂಗಮವಾಗುತ್ತದೆ. ಪ್ರವಾಸಿಗರೆಲ್ಲರೂ ಭವಾನಿ ದ್ವೀಪದಿಂದ ಪವಿತ್ರ ಸಂಗಮಂ ನಲ್ಲಿ ನಡೆಯುವ ಪವಿತ್ರ ಆರತಿಯನ್ನು ಕಣ್ತುಂಬಿಸಿಕೊಳ್ಳಲು ತೆರಳುತ್ತಿದ್ರು.
Advertisement
ಬೋಟ್ ನಲ್ಲಿದ್ದ ಹೆಚ್ಚಿನ ಸಂಖ್ಯೆಯ ಜನರು ಪ್ರಕಾಶಂ ಜಿಲ್ಲೆಯ ಒಂಗಲ್ ನಿವಾಸಿಗಳು ಎಂದು ತಿಳಿದು ಬಂದಿದ್ದು, ಎಲ್ಲರೂ ಕ್ರೀಡಾಕೂಟಗಳಲ್ಲಿ ಬಳಕೆಯಾಗುವ ಸಾಧರಾಣ ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದರು.
ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸುವಂತೆ ಆದೇಶ ನೀಡಿದ್ದಾರೆ.