ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಬೋಟ್ ಅಳಿವೆಗೆ ಸಿಲುಕಿ ಮುಳುಗಡೆಯಾದ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಗೋಡು ಅಳಿವೆ ತೀರದಲ್ಲಿ ರಾತ್ರಿ ವೇಳೆ ನೆಡೆದಿದೆ.
ಯಾಸಿನ್ ಹೆಸರಿನ ಯಾಂತ್ರಿಕ ಬೋಟ್‍ನಲ್ಲಿ ಸುಮಾರು 23 ಮೀನುಗಾರರಿದ್ದು, ಅಳಿವೆಯಲ್ಲಿ ಸಿಲುಕಿದ್ದವರನ್ನು ಮೂರು ಬೋಟ್‍ಗಳ ಮೂಲಕ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಕಾಸರಗೋಡು ಬಂದರು ತೀರದ ಬಳಿ ಹೆಚ್ಚು ಹೂಳು ತುಂಬಿದ್ದರಿಂದಾಗಿ ಈ ಅವಘಡ ನೆಡೆದಿದೆ.
ಕಳೆದ ಎರಡು ತಿಂಗಳಲ್ಲಿ ಎರಡನೇ ಪ್ರಕರಣ ಇದಾಗಿದ್ದು, ಬಂದರು ಇಲಾಖೆ ಹೂಳನ್ನು ತೆಗೆಸದ ಕಾರಣ ಈ ರೀತಿಯ ಘಟನೆ ನೆಡೆಯುತ್ತಿದೆ. ಇದರಿಂದ ಮೀನುಗಾರರು ಮೀನುಗಾರಿಕೆಗೆ ತೆರಳದಂತಹ ಸ್ಥಿತಿಗೆ ತಲುಪಿದೆ.
ಈ ಘಟನೆಯ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.