ಹಾಸನ: ಜಿಲ್ಲೆ ಹಲವು ವೈಶಿಷ್ಟ್ಯಗಳಿಗೆ ಹೆಸರು ವಾಸಿಯಾಗಿದೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳದಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳಿವೆ. ಇದರ ಜೊತೆಗೆ ಹಾಸನ ತಾಲೂಕಿನ ಗೊರೂರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ಕೂಡ ಒಂದು. ಹೇಮಾವತಿ (Hemavathi0 ಹಿನ್ನೀರಿನಲ್ಲಿರುವ ಈ ಐತಿಹಾಸಿಕ ಚರ್ಚ್ ನೀರಿನಲ್ಲಿ ಮುಳುಗಿ ತೇಲುವಂತೆ ಭಾಸವಾಗುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ 9Tourist) ದಂಡೆ ಹರಿದುಬರುತ್ತಿದೆ.
Advertisement
ನೀವು ನೋಡ್ತಿರೋದು ನೀರಿನಲ್ಲಿ ತೇಲುವ ಹಡಗಿನಂತೆ ಭಾಸವಾಗ್ತಿದೆ ಅಲ್ವಾ. ಆದರೆ ಇದು ಹಾಸನ ಜಿಲ್ಲೆಯಲ್ಲಿರುವ ಐತಿಹಾಸಿಕ ಶೆಟ್ಟಿಹಳ್ಳಿ ಚರ್ಚ್. ಮಳೆಗಾಲ ಬಂತೆಂದರೆ ಸಾಕು ಪ್ರಕೃತಿಯ ಚೆಲುವನ್ನು ದಿನದಿಂದ ದಿನಕ್ಕೆ ಬದಲು ಮಾಡಿ ಬಿಡುತ್ತದೆ. ಹೊಸತನದಿಂದ ಕಂಗೊಳಿಸುವಂತೆ ಮಾಡುತ್ತದೆ. ಇಂಥ ನಿಸರ್ಗ ಸಿರಿಯನ್ನು ಕಣ್ತುಂಬಿಕೊಳ್ಳುವುದೇ ರಮಣೀಯ. ಬೇಸಿಗೆಯಲ್ಲಿ ಬರಡಾಗಿ ಭಣಗುಡುವ ಹಳ್ಳಕೊಳ್ಳ, ಜಲಾಶಯಗಳ ಹಿನ್ನೀರು, ಮಳೆಗಾಲದಲ್ಲಿ ಒಡಲು ತುಂಬಿಕೊಂಡು ಸಂಭ್ರಮಿಸುವ ರೀತಿಯೇ ಬೇರೆ.
Advertisement
Advertisement
ಹಾಸನ (Hassan) ಜಿಲ್ಲೆಯ ಜೀವನದಿ ಹೇಮಾವತಿ ಅಣೆಕಟ್ಟೆ ಕಳೆದ ಮೂರು ವರ್ಷಗಳಿಂದಲೂ ಭರ್ತಿಯಾಗಿದೆ. ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿರುವ ಹಳೆಯ ಕಾಲದ ಚರ್ಚ್ ಮುಳುಗಿದ್ದು, ಮಿನಿ ಹಡಗು ನೀರಿನಲ್ಲಿ ತೆಲುವಂತೆ ಕಾಣುತ್ತಿದೆ. ಐತಿಹಾಸಿಕ ಚರ್ಚ್ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಈ ತಾಣದಲ್ಲಿ ಕನ್ನಡ, ತಮಿಳು ಸೇರಿದಂತೆ ಬೇರೆ ಭಾಷೆಯ ಹತ್ತಾರು ಸಿನಿಮಾಗಳ ಶೂಟಿಂಗ್ ನಡೆದಿದೆ. ಹಾಡುಗಳ ಚಿತ್ರೀಕರಣವಾಗಿದೆ. ದೂರದಿಂದ ನೋಡಿದ್ರೆ ತೇಲುತ್ತಿರುವಂತೆ ಭಾಸವಾಗುವ ನಯನ ಮನೋಹರವಾದ ಪ್ರಾರ್ಥನಾಲಯಕ್ಕೆ ಪ್ರವಾಸಿಗರು ದಂಡೇ ಹರಿದು ಬರ್ತಿದೆ. ವೀಕೆಂಡ್ ದಿನಗಳಲ್ಲಿ ಇಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿದ್ದು, ಚರ್ಚ್ ಬ್ಯಾಗ್ರೌಂಡ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಕರಾವಳಿ ಸಮುದ್ರದಲ್ಲಿ ಅಪರೂಪದ ಬಾಲವಿಲ್ಲದ ಸನ್ ಫಿಶ್ ಪತ್ತೆ
Advertisement
ಸುತ್ತಲೂ ಹರಡಿಕೊಂಡಿರುವ ತಿಳಿನೀರಿನ ರಾಶಿ, ಹಸಿರು ಹೊದ್ದು ಮಲಗಿರುವ ಬೆಟ್ಟಗುಡ್ಡಗಳ ಸಾಲಿನ ನಡುವೆ ಆಕರ್ಷಣೀಯ ದೃಶ್ಯ ಮತ್ತಷ್ಟು ಮುದಗೊಳಿಸುತ್ತಿದೆ. ಇಟ್ ಈಸ್ ಸೋ ಬ್ಯೂಟಿ ಅಂತ ಪ್ರವಾಸಿಗರು ಸಂತಸ ಪಡುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವ ಅಂದ್ರೆ 1860 ರಲ್ಲಿ ಬ್ರಿಟಿಷ್ ಪಾದ್ರಿಗಳು ನಿರ್ಮಿಸಿದ್ದಾರೆಂದು ಹೇಳಲಾಗುವ ಗೋಥಿಕ್ ವಾಸ್ತು ಶಿಲ್ಪ ಶೈಲಿಯ ಈ ಸುಂದರ ವಿನ್ಯಾಸದ ಚರ್ಚ್ ಹೇಮಾವತಿ ಜಲಾಶಯ ತುಂಬಿದಾಗ ನೀರಿನಲ್ಲಿ ಮುಳುಗಿದರೆ, ಬೇಸಿಗೆಯಲ್ಲಿ ಏಕಾಂಗಿಯಾಗಿರುತ್ತದೆ. ಆದ್ರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಹಾಗೂ ಪ್ರವಾಸಿ ತಾಣವನ್ನು ಅಭಿವೃದ್ಧಿ ಮಾಡದಿರುವುದಕ್ಕೆ ಬೇಸರದ ಸಂಗತಿ.
ಆಕರ್ಷಣೀಯ ತಾಣಗಳಲ್ಲಿ ಒಂದಾಗಿರುವ ಶೆಟ್ಟಿಹಳ್ಳಿ ಚರ್ಚ್ ಪ್ರದೇಶವನ್ನ ಅಭಿವೃದ್ಧಿ ಪಡಿಸುವ ಕೆಲಸವಾಗಬೇಕಿದೆ. ಶ್ರವಣಬೆಳಗೊಳ, ಬೇಲೂರು, ಹಳೇಬೀಡಿಗೆ ಬರುವ ಪ್ರವಾಸಿಗರನ್ನು, ಮುಂಗಾರಿನಲ್ಲಿ ಕಂಗೊಳಿಸುವ ಚರ್ಚ್ ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಸುಳ್ಳಲ್ಲ.