ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉಡುಪಿ (Udupi) ಜಿಲ್ಲೆಯ ಮಲ್ಪೆ (Malpe) ಮೂಲದ ಸೀ ಹಂಟರ್ ಹೆಸರಿನ ಬೋಟ್‌ನ (Boat) ತಳಭಾಗದ ಕಬ್ಬಿಣದ ವೆಲ್ಡಿಂಗ್ ಬಿಟ್ಟು ಹೋದ ಪರಿಣಾಮ ಮುಳುಗಿದೆ. ಬೋಟ್‌ನಲ್ಲಿದ್ದ 8 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಮಲ್ಪೆಯಿಂದ ಮಹಾರಾಷ್ಟ್ರದ (Maharashtra) ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ 9 ನಾಟಿಕನ್ ಮೈಲುದೂರದ ಲೈಟ್ ಹೌಸ್ ಬಳಿ ಚಲಿಸುತಿದ್ದ ವೇಳೆ ಬೋಟ್ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ. ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಇಂಜಿನ್ ಭಾಗಕ್ಕೆ ನೀರು ತುಂಬಿದೆ. ತಕ್ಷಣ ಸ್ಥಳೀಯ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಣೆಮಾಡಿದ್ದಾರೆ.
Advertisement
Advertisement
ಮುಳುಗುವ ಹಂತದಲ್ಲಿದ್ದ ಬೋಟ್‌ನ್ನು ದಡಕ್ಕೆ ತರಲು ಪ್ರಯತ್ನ ಪಟ್ಟರೂ, ಮಾರ್ಗ ಮಧ್ಯದಲ್ಲೇ ಬೋಟ್ ಮುಳುಗಡೆಯಾಗಿದೆ. ಬೋಟ್ ಮುಳುಗಡೆಯಿಂದ 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ.