ಇಂದಿನಿಂದ ಬಿಎಂಟಿಸಿಯ `ದಿವ್ಯ ದರ್ಶನ’ ವಿಶೇಷ ಟೂರ್ ಪ್ಯಾಕೇಜ್ ಆರಂಭ

Public TV
1 Min Read
BMTC Divya Darshan

– ಮೊದಲ ದಿನವೇ ಬೆಂಗಳೂರಿಗರಿಂದ ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ಬಿಎಂಟಿಸಿಯ ವಿಶೇಷ ಟೂರ್ ಪ್ಯಾಕೇಜ್ ದಿವ್ಯ ದರ್ಶನ (Divya Darshana) ಇಂದಿನಿಂದ ಆರಂಭವಾಗಿದೆ. ಈ ವಿಶೇಷ ಪ್ಯಾಕೇಜ್‌ಗೆ ಮೊದಲ ದಿನವೇ ಬೆಂಗಳೂರಿಗರಿಂದ (Bengaluru) ಭರ್ಜರಿ ರೆಸ್ಪಾನ್ಸ್ ದೊರೆತ್ತಿದ್ದು, ಬಿಎಂಟಿಸಿಯ 3 ಎಸಿ ಬಸ್‌ಗಳಲ್ಲಿ 200ಕ್ಕೂ ಹೆಚ್ಚು ಜನ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳ ದರ್ಶನ ಪಡೆಯುತ್ತಿದ್ದಾರೆ.

ಶನಿವಾರ ಬೆಳಗ್ಗೆ 8.30ಕ್ಕೆ ಮೆಜೆಸ್ಟಿಕ್‌ನಿಂದ (Majestic) ಬಸ್ ಹೊರಟಿದ್ದು, ಬಸ್‌ಗಳ ಸಿಬ್ಬಂದಿ, ಪ್ರಯಾಣಿಕರಿಗೆ ನಗರದ 8 ದೇವಾಲಯಗಳಲ್ಲಿ ನೇರ ದರ್ಶನ ಮಾಡಿಸಲಿದ್ದಾರೆ. ಪ್ರಮುಖವಾಗಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಕುರುಮಾರಿ ಅಮ್ಮ ದೇವಾಲಯ, ಓಂಕಾರ ಹೀಲ್ಸ್, ಇಸ್ಕಾನ್ ವೈಕುಂಠ ದೇವಾಲಯ, ಆರ್ಟ್ ಆಫ್ ಲಿವಿಂಗ್, ಬನಶಂಕರಿ ದೇವಾಲಯದ ವೀಕ್ಷಣೆ ಮಾಡಬಹುದಾಗಿದೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳಿದ್ರೆ 1,000 ರೂ. ದಂಡ: ರಾಜ್ಯ ಸರ್ಕಾರದಿಂದ ಗೆಜೆಟ್ ಆದೇಶ

ಪ್ರತೀ ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಬಿಎಂಟಿಸಿಯಿಂದ (BMTC) ಟೆಂಪಲ್ ಟೂರ್ ನಡೆಯಲಿದ್ದು, ವಯಸ್ಕರಿಗೆ 450 ರೂ., ಮಕ್ಕಳಿಗೆ 350 ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಭಾನುವಾರ ಟೂರ್ ಪ್ಯಾಕೇಜ್‌ನ ಸೀಟ್‌ಗಳು ಸಹ ಬಹುತೇಕ ಬುಕ್ ಆಗಿವೆ. ಶನಿವಾರ ಬಿಎಂಟಿಸಿಯ ದಿವ್ಯದರ್ಶನ ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಟೂರ್ ಪ್ಯಾಕೇಜ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೈಸೂರು | ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿ

Share This Article