ಬೆಂಗಳೂರು: ನಗರದ ಪ್ರಸಿದ್ದ ದೇವಾಲಯಗಳ ದರ್ಶನಕ್ಕಾಗಿ ಸಾರ್ವಜನಿಕರಿಗೆ ಬಿಎಂಟಿಸಿ (BMTC) ಹೊಸ ವೀಕೆಂಡ್ ಟೂರ್ ಪ್ಯಾಕೇಜ್‌ನ್ನು ಘೋಷಣೆ ಮಾಡಿ, ಚಾಲನೆ ನೀಡಿದೆ.ಇದನ್ನೂ ಓದಿ: ರಹೀಂ ಹತ್ಯೆ| ಮಂಗಳೂರು-ಬಂಟ್ವಾಳ ರಸ್ತೆಯಲ್ಲಿರುವ ನೂರಾರು ಅಂಗಡಿಗಳು ಬಂದ್
8 ಪ್ರಸಿದ್ದ ದೇವಾಲಯಗಳ ವೀಕ್ಷಣೆಯ ಒನ್ ಡೇ ಟೆಂಪಲ್ ಟೂರ್ ಯೋಜನೆಗೆ ಇಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದರು. ದಿವ್ಯ ದರ್ಶನ ಹೆಸರಿನಲ್ಲಿ ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಾಸ್ಥಾನ, ಕುರುಮಾರಿಅಮ್ಮ ದೇವಾಲಯ, ಓಂಕಾರ ಹೀಲ್ಸ್, ಇಸ್ಕಾನ್ ವೈಕುಂಠ ದೇವಾಲಯ, ಆರ್ಟ್ ಆಫ್ ಲಿವಿಂಗ್, ಬನಶಂಕರಿ ದೇವಾಲಯ ದರ್ಶನ ಮಾಡಿಸಲಾಗುತ್ತದೆ.
ವಾರಾಂತ್ಯದಲ್ಲಿ ಬೆಳಿಗ್ಗೆ 6:30ಕ್ಕೆ ಮೆಜೆಸ್ಟಿಕ್‌ನಿಂದ ಎಸಿ ಬಸ್‌ನಲ್ಲಿ ಹೊರಟು ಸಂಜೆ 6:30ಕ್ಕೆ ಮತ್ತೆ ಮೆಜೆಸ್ಟಿಕ್‌ಗೆ ವಾಪಸ್ ಬಂದು ಸೇರಲಿದೆ. ವಯಸ್ಕರಿಗೆ 450 ರೂ., ಮಕ್ಕಳಿಗೆ 350 ರೂ. ದರ ನಿಗದಿ ಮಾಡಲಾಗಿದ್ದು, ಇದೇ ವಾರಾಂತ್ಯದಿಂದ ಪ್ಯಾಕೇಜ್ ಸೌಲಭ್ಯಗಳು ಸಿಗಲಿವೆ.ಇದನ್ನೂ ಓದಿ: ರಹೀಂ ಹತ್ಯೆ| ಸಾಮೂಹಿಕ ರಾಜೀನಾಮೆ ನೀಡಿ: ಕಾಂಗ್ರೆಸ್ ವಿರುದ್ಧ ಮುಸ್ಲಿಮರ ಆಕ್ರೋಶ