– ಸಾರಿಗೆ ನೌಕರರ ಬೃಹತ್ ಹೋರಾಟ
ಬೆಂಗಳೂರು: ಇಂದು ರಾಜ್ಯ ಸಾರಿಗೆ ಬಸ್ಸುಗಳು ಸಂಚಾರ ಮಾಡೋದು ಬಹುತೇಕ ಅನುಮಾನ. ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಬೆಳಗ್ಗೆಯಿಂದನೇ ಹೋರಾಟ ಮಾಡಲು ಸಾರಿಗೆ ಇಲಾಖೆಯ ನೌಕರರು ಮುಂದಾಗಿದ್ದಾರೆ. ಬಸ್ ಸೇವೆ ಬಂದ್ ಮಾಡ್ತಾರಾ ಅನ್ನೋದರ ಬಗ್ಗೆ ನೌಕರರಲ್ಲೇ ಗೊಂದಲವಿದೆ.
Advertisement
ನಾವು ಸಹ ಸರ್ಕಾರದ ಕೆಲಸವನ್ನೇ ಮಾಡುತ್ತಿದ್ದೇವೆ. ಅದರೆ ನಾವು ಸರ್ಕಾರಿ ನೌಕರರಲ್ಲ. ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆ ಅನ್ನೋ ಹೆಸರಿರೋ ಬಿಎಂಟಿಸಿ ನೌಕರರ ಹಲವು ವರ್ಷಗಳ ಬೇಡಿಕೆ. ಬಿಎಂಟಿಸಿ ನೌಕರರು ಸೇರಿದಂತೆ ರಾಜ್ಯದ ಸಾರಿಗೆ ನೌಕರರು ಅನೇಕ ವರ್ಷಗಳಿಂದ ನಮ್ಮನ್ನ ರಾಜ್ಯ ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಎಷ್ಟೋ ಬಾರಿ ಮನವಿ ಮಾಡಿದ್ದರು. ನಮ್ಮನ್ನ ರಾಜ್ಯ ಸರ್ಕಾರಿ ನೌಕರರು ಎಂದು ಸರ್ಕಾರ ಆದೇಶ ಮಾಡಿಲ್ಲವೆಂದು ಇಂದು ಬೃಹತ್ ಉಪವಾಸ ಸತ್ಯಾಗ್ರಹ ಮಾಡಲು ಬಿಎಂಟಿಸಿ ನೌಕರರು, ಕೆಎಸ್ ಆರ್ ಟಿಸಿ ಹಾಗೂ ರಾಜ್ಯ ಸಾರಿಗೆ ಇಲಾಖೆಯ ನೌಕರರು ನಿರ್ಧರಿಸಿದ್ದಾರೆ.
Advertisement
Advertisement
ಇಂದು ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡುವ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಸಾರಿಗೆ ನೌಕರರು ಮುಂದಾಗಿದ್ದಾರೆ. ಏಕಕಾಲದಲ್ಲಿ 10 ಸಾವಿರಕ್ಕೂ ಹೆಚ್ಚು ನೌಕರರು ಬಸ್ ಗಳನ್ನ ಬಿಟ್ಟು ರೋಡಿಗಿಳಿದು ಪ್ರತಿಭಟನೆ ಮಾಡಲಿದ್ದು, ಇದರಿಂದ ಬಸ್ ರಾಜ್ಯ ಸಾರಿಗೆ ಇಲಾಖೆಯ ನಾಲ್ಕು ಸಂಸ್ಥೆಯ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗಲಿದೆ. ಸಾರಿಗೆ ನೌಕರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹವನ್ನ ಮಾಡುತ್ತಿದ್ದಾರೆ. ಈ ಬಜೆಟ್ ನಲ್ಲಾದರು ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಆದೇಶ ಹೊರಡಿಸಲಿ ಎಂದು ನೌಕರರು ಒತ್ತಾಯಿಸಿ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.
Advertisement
ಏಕಕಾಲದಲ್ಲಿ 10 ಸಾವಿರಕ್ಕೂ ಹೆಚ್ಚು ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ರಾಜ್ಯ ಸಾರಿಗೆಯನ್ನ ಸಂಪೂರ್ಣವಾಗಿ ಬಂದ್ ಮಾಡುತ್ತಾರಾ, ಇಲ್ಲವಾ ಅನ್ನೋ ಗೊಂದಲವಿದೆ. ಬೆಳಗ್ಗೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ರೋಡ್ ಗೆ ಇಳಿಯೋದು ಬಹುತೇಕ ಅನುಮಾನವಿದೆ.