ಬೆಂಗಳೂರು: ಕೊರೊನಾ (Corona) ಕಾರಣಕ್ಕೆ ಬಿಎಂಟಿಸಿಯ ವೋಲ್ವೋ ಬಸ್ಗಳ (BMTC Volvo Bus) ದರವನ್ನು ಶೇ.34 ರಷ್ಟು ಕಡಿಮೆ ಮಾಡಿದ್ದ ಬಿಎಂಟಿಸಿ ಮತ್ತೆ ಹಳೆಯ ದರವನ್ನು ಜಾರಿಗೆ ತಂದಿದೆ.
ಕೊರೊನಾ ಸಮಯದಲ್ಲಿ ಐಟಿಬಿಟಿ (ITBT) ಸೆಕ್ಟರ್ ಕಡೆ ಹೆಚ್ಚು ಸಂಚಾರ ಮಾಡುತ್ತಿದ್ದ ವೋಲ್ವೋ ಬಸ್ ಗಳನ್ನ ಬೇರೆ ಬೇರೆ ಮಾರ್ಗಗಳಿಗೆ ಬಿಎಂಸಿಟಿ ನಿಯೋಜನೆ ಮಾಡಿತ್ತು. ಸಾರ್ವಜನಿಕರ ಹಿತಾಸಕ್ತಿಯಿಂದ ಶೇ.34 ರಷ್ಟು ದರವನ್ನ ಕಡಿಮೆ ಮಾಡಿ ಪ್ರಯಾಣಿಕರನ್ನ ವೋಲ್ವೋ ಬಸ್ ಗಳ ಕಡೆ ಸೆಳೆಯುವ ಕೆಲಸ ಮಾಡಿತ್ತು. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಹೆಸ್ರು ಕೈತಪ್ಪಿದ್ಯಾ? – ನೀವೇ ಪರಿಶೀಲನೆ ಮಾಡಿ
ಇದೀಗ ಇಂಧನ ದರ ಏರಿಕೆಯ ಕಾರಣ ನೀಡಿ ಬಿಎಂಟಿಸಿ ಮತ್ತೆ ಡಿಸೆಂಬರ್ 2021ರ ಹಿಂದಿನ ದರವನ್ನ ಜಾರಿಗೆ ತಂದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ನಲ್ಲೇ ಹುಡುಗಿ ಮುಂದೆ ಹಸ್ತಮೈಥುನ – ದೂರು ನೀಡಲು ಸಂತ್ರಸ್ತೆ ಹಿಂದೇಟು
ದರದ ಪಟ್ಟಿ:
- ಸಾಮಾನ್ಯ ದರ – 20ರೂ. (19ರೂ. + 1 GST) ನಿಂದ 25 ರೂ. (23.81 ರೂ. + 1.19ರೂ. GST)ಕ್ಕೆ ಏರಿಕೆಯಾಗಿದೆ.
- ಮಾಸಿಕ ಪಾಸ್ ದರ 1,500ರೂ. (1,428ರೂ. + 72ರೂ. GST) ರಿಂದ 1,800ರೂ. (1,714.29ರೂ. + 85.71ರೂ. GST) ಕ್ಕೆ ಏರಿಕೆಯಾಗಿದೆ
- ದಿನದ ಪಾಸ್ ದರ 100 ರೂ. (95ರೂ. + 5ರೂ. GST) ರಿಂದ 120ರೂ. (114.29ರೂ. + 5.21ರೂ. GST)ಕ್ಕೆ ಏರಿಕೆಯಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k