ಬೆಂಗಳೂರು: ಬಿಎಂಟಿಸಿಯ ಕೆಲವೊಂದು ಎಡವಟ್ಟುಗಳಿಂದ ಸಂಸ್ಥೆಯ ಆದಾಯಕ್ಕೆ ಹಾಗೂ ಸಿಬ್ಬಂದಿ ಕೆಲಸಕ್ಕೆ ಸಮಸ್ಯೆ ಉಂಟಾಗಿದೆ.
ಒಬ್ಬ ಕಂಡಕ್ಟರ್ ತನ್ನ ಕೈಯಲ್ಲಿ ನೂರಾರು ಟಿಕೆಟ್‍ಗಳನ್ನು ಹಿಡಿದು, ಮತ್ತೊಂದು ಕೈಯಲ್ಲಿ ಹಣ ಪಡೆಯುತ್ತಾ ಚಿಲ್ಲರೆ ವಾಪಸ್ ಕೊಡಬೇಕು. ಈ ಹಿಂದೆ ಬರುತ್ತಿದ್ದ ಟಿಕೆಟ್‍ಗಳ ಅಗಲ, ಉದ್ದ ಚಿಕ್ಕದಾಗಿ ಇರುತ್ತಿತ್ತು. ಒಮ್ಮೆಲೇ ನೂರಾರು ಟಿಕೆಟ್‍ಗಳನ್ನು ಕೈಯಲ್ಲಿ ಹಿಡಿಯಬಹುದಿತ್ತು.
ಈಗ ಕೆಲವು ದಿನಗಳಿಂದ ಬರುತ್ತಿರುವ ಟಿಕೆಟ್‍ಗಳು ಸಾಕಷ್ಟು ಅಗಲವಾಗಿ ಇದ್ದು, ಕೈಯಲ್ಲಿ ಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ನಿರ್ವಾಹಕರು ಒಂದು ಗಂಟೆ ಮೊದಲೇ ಬಂದು ಟಿಕೆಟ್‍ಗಳನ್ನು ಪಡೆದು ಚಾಕುವಿನಿಂದ ಎರಡು ಭಾಗವನ್ನು ಕಟ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ.
ಟಿಕೆಟ್ ಪ್ರಿಂಟ್‍ಗೆ ಹೆಚ್ಚಿನ ಹಾಳೆ ವ್ಯಯವಾಗುತ್ತಿರುವುದರಿಂದ ಬಿಎಂಟಿಸಿಗೂ ಆರ್ಥಿಕವಾಗಿ ಇದು ಹೊರೆಯಾಗುತ್ತೆ. ಟನ್‍ಗಂಟಲೇ ಪೇಪರ್ ಗಳು ವ್ಯರ್ಥವಾಗುತ್ತಿರುವುದರಿಂದ ಪರಿಸರಕ್ಕೂ ಇದು ಹಾನಿಯಾಗುತ್ತಿದೆ. ಈ ಬಗ್ಗೆ ಬಿಎಂಟಿಸಿ ಗಮನ ಹರಿಸಬೇಕಿದೆ.