ಬೆಂಗಳೂರು: ಬಿಎಂಟಿಸಿಯ (BMTC) ರಜತ ಮಹೋತ್ಸವದ ಅಂಗವಾಗಿ ಸಂಸ್ಥೆಯ ಸಮಸ್ತ ಸಿಬ್ಬಂದಿಗೆ ಬಿಜಿಎಸ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಿತು.
ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಕ್ರೀಡಾಕೂಟ (Sports Day) ನಡೆಯಿತು. 45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಕೆಳಗಿನ ವಯಸ್ಸಿನ ವರ್ಗದಲ್ಲಿ ಕ್ರೀಡಾಕೂಟ ನೆರವೇರಿತು.
Advertisement
Advertisement
ಮಹಿಳೆಯರಿಗೆ ಖೋ ಖೋ, ಥ್ರೋ ಬಾಲ್ ಹಾಗೂ 75 ಮೀಟರ್ ಓಟದ ಸ್ಪರ್ಧೆ ಮತ್ತು ಪುರುಷ ವಿಭಾಗದಲ್ಲಿ ಕಬಡ್ಡಿ, ಕ್ರಿಕೆಟ್, 100 ಮೀಟರ್ ಓಟ, ಶಾಟ್ಪುಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕ್ರಿಕೆಟ್ ಆಡುವ ಮೂಲಕ ಸಿಬ್ಬಂದಿಯನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದರು. ಜಿ.ಸತ್ಯವತಿ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ಹಾಗೂ ಅಧಿಕಾರಿಗಳು ಕಬಡ್ಡಿ ಹಾಗೂ ಕ್ರಿಕೆಟ್ ಸ್ಪರ್ಧೆಗಳನ್ನು ವೀಕ್ಷಿಸುವ ಮೂಲಕ ಸ್ಪರ್ಧಾಳುಗಳನ್ನು ಪ್ರೆರೇಪಿಸಿದರು.
Advertisement
Advertisement
ವಿಜೇತರಿಗೆ ಮಾನ್ಯ ಸಚಿವರು ಬಹುಮಾನಗಳನ್ನು ಪ್ರದಾನ ಮಾಡಿದರು. ಬಳಿಕ ಮಾತನಾಡಿ, ನಮ್ಮ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ತಮ್ಮ ಒತ್ತಡ ಕೆಲಸದ ನಡುವೆಯೂ ಈ ರೀತಿಯ ಕ್ರೀಡೆಗಳಲ್ಲಿ ಅತೀ ಉತ್ಹಾಹದಿಂದ ಭಾಗವಹಿಸಿರುವುದು ಹೆಮ್ಮೆಯ ವಿಷಯ. ಸುಮಾರು 800ಕ್ಕೂ ಹೆಚ್ಚು ನೌಕರರು ಭಾಗವಹಿಸಿರುವುದನ್ನು ತಿಳಿದು ಬಹಳ ಸಂತಸವಾಯಿತು. ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳು ಸಾರಿಗೆ ಸಂಸ್ಥೆಯಲ್ಲಿ ಮತ್ತಷ್ಟು ಕ್ರಿಯಾತ್ಮಕತೆಯನ್ನು ಬೆಳೆಸಲು ಸಹಕಾರಿಯಾಗುವುದಾಗಿ ತಿಳಿಸಿ, ಬಿಎಂಟಿಸಿಯು ಆಯೋಜಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಉತ್ತಮ ಎಂದು ತಿಳಿಸಿ ಎಲ್ಲರಿಗೂ ಶುಭ ಕೋರಿದರು. ಇದನ್ನೂ ಓದಿ: ರೈತರಿಗೆ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಲು ಆದ್ಯತೆ ಕೊಡಿ: ಗೆಹ್ಲೋಟ್
ಎರಡು ದಿನಗಳ ನಡೆದ ಕ್ರೀಡಾ ಕೂಟದಲ್ಲಿ ಬಿಎಂಟಿಸಿ ಪೂರ್ವ ವಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.
Web Stories