ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಪ್ರಯಾಣಿಕರೇ ಗಮನಿಸಿ, ಇಂದು ಮಧ್ಯರಾತ್ರಿಯಿಂದಲೇ ಬಿಎಂಟಿಸಿ (BMTC) ಪ್ರಯಾಣ ದುಬಾರಿಯಾಗಲಿದೆ.
ಇಲ್ಲಿಯವರೆಗೆ ಬಿಎಂಟಿಸಿ ದರ ಒಂದು ಸ್ಟೇಜ್‌ಗೆ 5 ರೂ. ಇತ್ತು. ಈಗ 1 ರೂಪಾಯಿ ಹೆಚ್ಚಳವಾಗಿ 6 ರೂ. ಆಗಿದೆ. ಹೀಗಾಗಿ ಬಸ್ಸು ಹತ್ತಿದ ನಂತರ ಬರುವ ಮೊದಲ ಸ್ಟೇಜ್‌ಗೆ 6 ರೂ. ದರವನ್ನು ನಿಗದಿ ಪಡಿಸಲಾಗಿದೆ. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಬಿಎಂಟಿಸಿ ಬಸ್ಸಿನಲ್ಲಿ ಅತೀ ಹೆಚ್ಚು ಅಂದರೆ 25 ಸ್ಟೇಜ್ ಮಾತ್ರ ಇದೆ. ಬೆಂಗಳೂರಲ್ಲಿ ಪ್ರತಿನಿತ್ಯ ಸುಮಾರು 5,800 ಬಿಎಂಟಿಸಿ ಬಸ್ಸುಗಳು 1,800 ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ.
ಎಷ್ಟು ಏರಿಕೆ?
ಮೆಜೆಸ್ಟಿಕ್‌ನಿಂದ (Majestic) ಜೆಪಿನಗರ 6ನೇ ಹಂತಕ್ಕೆ 20 ರೂ. ಇದ್ದರೆ ಈಗ ಇನ್ನು ಮುಂದೆ 24 ರೂ. ಆಗಲಿದೆ. ಮೆಜೆಸ್ಟಿಕ್‌ನಿಂದ ದೊಡ್ಡಬಳ್ಳಾಪುರಕ್ಕೆ 25 ರೂ. ಇದ್ದರೆ ಭಾನುವಾರದಿಂದ 30 ರೂ. ಆಗಲಿದೆ.