ಬೆಂಗಳೂರು: ಕಳೆದ ಮಾರ್ಚ್ ತಿಂಗಳಿಂದ ರಿಟೇಲ್ ವ್ಯಾಪಾರಿಗಳಿಂದ ಡೀಸೆಲ್ ಖರೀದಿ ಮಾಡಲಾಗ್ತಿದೆ. ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಬಿಎಂಟಿಸಿ ಎಂಡಿ ಸತ್ಯವತಿ ಹೇಳಿದ್ದಾರೆ.
ಡೀಸೆಲ್ ಕೊರತೆ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ ಮಾರ್ಚ್ ತಿಂಗಳಿಂದ ರಿಟೇಲ್ ವ್ಯಾಪಾರಿಗಳಿಂದ ಡೀಸೆಲ್ ಖರೀದಿ ಮಾಡಲಾಗ್ತಿದೆ. ಬಲ್ಕ್ ಆಗಿ ತಗೋಳೋದ್ರಿಂದ ಪ್ರತಿ ಲೀಟರ್ ಗೆ 32 ರೂಪಾಯಿ ಹೆಚ್ಚಾಗ್ತಿತ್ತು. ಅದನ್ನ ತಪ್ಪಿಸಲು ರಿಟೈಲ್ ಮಾರುಕಟ್ಟೆಯಿಂದ ಡಿಪೋ ಬಂಕ್ ಗಳಿಗೆ ಡೀಸಲ್ ಪೂರೈಕೆ ಮಾಡಿಸಿಕೊಳ್ಳುತ್ತಿದ್ದೇವೆ ಎಂದರು.
Advertisement
Advertisement
ಕಳೆದ ಮೂರು ದಿನಗಳಿಂದ ರಿಟೈಲ್ ಮಾರುಕಟ್ಟೆಯವರು ಬಾಂಕ್ ಗೆ ಬಂದು ಡಿಸೇಲ್ ಹಾಕಿಸಿಕೊಳ್ಳಿ ಅಂತಾ ಡಿಪೋ ಬಂಕ್ ಗಳಿಗೆ ಸಪೈ ನಿಲ್ಲಿಸಿದ್ದಾರೆ. ಖಾಸಗಿ ಬಂಕ್ ನಲ್ಲಿ ಬಿಎಂಟಿಸಿ ಬಸ್ ಗೆ ಡೀಸೆಲ್ ಹಾಕಿಸಿಕೊಳ್ಳೋದ್ರಿಂದ ಟ್ರಾಫಿಕ್ ಸಮಸ್ಯೆ ಆಗಲಿದೆ. ರಿಟೈಲ್ ವರ್ತಕರ ಬಳಿ ಮಾತುಕತೆ ಮಾಡುತ್ತಿದ್ದೇವೆ. ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಇನ್ನೂ ಎರಡು ದಿನಗಳಿಗೆ ಆಗುವಷ್ಟು ಸ್ಟಾಕ್ ಇದೆ. ಈ ಸಂಬಂಧ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಇಲಾಖೆಗೂ ಪತ್ರ ಬರೆದಿದ್ದೇವೆ. ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸತ್ಯವತಿ ಹೇಳಿದರು. ಇದನ್ನೂ ಓದಿ: ರಾಜಧಾನಿಯಲ್ಲಿ ಪ್ರಯಾಣಿಕರಿಗೆ ತಟ್ಟಲಿದೆ ಡೀಸೆಲ್ ಕೊರತೆ ಬಿಸಿ – ಬಸ್ ಸಂಚಾರದಲ್ಲಿ ವ್ಯತ್ಯಯ