– ಶಾಂತಿನಗರ ಡಿಪೋ ಮುಂದೆ ಚಾಲಕರಿಂದ ಪ್ರೊಟೆಸ್ಟ್
– ಅಧಿಕಾರಿಗಳ ಸಂಧಾನ ಯಶಸ್ವಿ, ಕರ್ತವ್ಯಕ್ಕೆ ಹಾಜರ್
ಬೆಂಗಳೂರು: ಸಂಬಳ (Salary) ಪಾವತಿ ಮಾಡದ್ದಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ (BMTC Electric Bus) ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಸರಿಯಾಗಿ ಸಂಬಳ ಪಾವತಿ ಮಾಡದ್ದಕ್ಕೆ ಪ್ರತಿಭಟಿಸಿದ ನೌಕರರು ಮಂಗಳವಾರ ಬೆಳಗ್ಗೆಯಿಂದ ಗಾಡಿಯನ್ನು ಹೊರಗಡೆ ತೆಗೆದಿರಲಿಲ್ಲ. ಕೊನೆಗೆ ಬಿಎಂಟಿಸಿ ಅಧಿಕಾರಿಗಳ ಸಂಧಾನ ಯಶಸ್ವಿಯಾದ ಬಳಿಕ ಚಾಲಕರು (Drivers) ಡಿಪೋದಿಂದ ಬಸ್ಸುಗಳನ್ನು ಹೊರಗಡೆ ತೆಗೆದಿದ್ದಾರೆ.
Advertisement
ಶಾಂತಿನಗರ ಡಿಪೋ- 3 ರ (Shanti Nagar Depot) ಮುಂದೆ ಬಸ್ಸನ್ನು ಹೊರ ತೆಗೆಯದೇ ಪ್ರತಿಭಟಿಸಿದರು. ಶೀಘ್ರವೇ ಬಿಎಂಟಿಸಿ ಅಧಿಕಾರಿಗಳು ವೇತನ ನೀಡುವ ಭರವಸೆ ನೀಡಿದ ಬಳಿಕ ಮಧ್ಯಾಹ್ನ ಮುಷ್ಕರವನ್ನು ಹಿಂದಕ್ಕೆ ಪಡೆದು ಚಾಲಕರು ಕರ್ತವ್ಯಕ್ಕೆ ಹಾಜರಾದರು. ಇದನ್ನೂ ಓದಿ: ಬುರ್ಖಾ ತೆಗೆದು ವೋಟರ್ ಐಡಿ ತೋರಿಸಲು ಹೇಳಿದ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು
Advertisement
Advertisement
ಮುಷ್ಕರಕ್ಕೆ ಕಾರಣ ಏನು?
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೌಕರರನ್ನಾಗಿ ತೆಗೆದುಕೊಳ್ಳಲಾಗಿದೆ. ಉದ್ಯೋಗ ನೀಡುವಾಗ ಪ್ರತಿ ತಿಂಗಳು 26,000 ರೂ. ಸಂಬಳ ನೀಡುವುದಾಗಿ ಕಂಪನಿ ಹೇಳಿತ್ತು. ಆದರೆ ಕೇವಲ 18,000 ರೂ. ಸಂಬಳ ನೀಡುತ್ತಿದೆ. ಆರಂಭದಲ್ಲಿ ಪಿಎಫ್‌ಗೆ ಹಣ ಕಡಿತ ಮಾಡಲಾಗುತ್ತದೆ ಎಂದು ಹೇಳಿತ್ತು. ಆದರೆ ಪಿಎಫ್‌ಗೆ ನಮ್ಮ ಹಣ ಕಡಿತವಾಗಿಲ್ಲ.
Advertisement
ಮೊದಲ ಎರಡು ತಿಂಗಳು 2,000 ರೂ. ಕಡಿತ ಮಾಡಿದ್ದರೆ ಈಗ ಈ ತಿಂಗಳ ಸಂಬಳದಲ್ಲಿ 5,000 ರೂ. ಕಡಿತ ಮಾಡಲಾಗಿದೆ. ಈ ತಿಂಗಳು ಕೆಲವರಿಗೆ ಮಾತ್ರ ಸಂಬಳ ನೀಡಿದ್ದರೆ ಉಳಿದ ನೌಕರರಿಗೆ ಸಂಬಳವೇ ಆಗಿಲ್ಲ. ಆರಂಭದಲ್ಲಿ ಟಾಟಾ ಕಂಪನಿಯಲ್ಲಿ ಚಾಲಕರಾಗಿ ನೇಮಕ ಮಾಡಲಾಗುವುದು ಎಂದು ಹೇಳಿತ್ತು. ಆದರೆ ಈಗ ಆರ್ಯ ಹೆಸರಿನ ಕಂಪನಿಯಲ್ಲಿ ಕೆಲಸ ನೀಡಲಾಗಿದೆ. ವಸತಿ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ನಮಗೆ ವಸತಿ ನೀಡಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ.
ಬಿಎಂಟಿಸಿ ವ್ಯಾಪ್ತಿಗೆ ಬರಲ್ಲ
ಡಿಪೋ- 3 ರಲ್ಲಿ 136 ಎಲೆಕ್ಟ್ರಿಕ್ ಬಸ್ಸುಗಳಿವೆ. ಮೂರು ಶಿಫ್ಟ್ ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರು ಕೆಲಸ ಮಾಡುತ್ತಿದ್ದಾರೆ. ಈ ಎಲೆಕ್ಟ್ರಿಕ್ ಬಸ್ ಚಾಲಕರು ಬಿಎಂಟಿಸಿ ಸಂಸ್ಥೆಯ ಅಧೀನಕ್ಕೆ ಒಳಪಡುವುದಿಲ್ಲ. ಎಲೆಕ್ಟ್ರಿಕ್ ಬಸ್ ನೋಡಿಕೊಳ್ಳುವ ಕಂಪನಿಯೇ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಈ ಕಾರಣಕ್ಕೆ ಖಾಸಗಿ ಕಂಪನಿಯ ಮಾನಂದಂಡಕ್ಕೆ ಅನುಗುಣವಾಗಿ ಸಂಬಳ ನಿಗದಿ ಮಾಡಿದೆ.