ಬೆಂಗಳೂರು: ಬಿಎಂಟಿಸಿ ಚಾಲಕರ ಮೊಬೈಲ್ ಬಳಕೆ ನಿಷಿದ್ಧಗೊಳಿಸಿ ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಚಾಲಕರು ಇನ್ನು ಮುಂದೆ ಡ್ಯೂಟಿಯಲ್ಲಿ ಇರಬೇಕಾದರೆ ಮೊಬೈಲ್ ತರುವಂತಿಲ್ಲ. ಆಯಾ ಡಿಪೋಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಇಡಬೇಕು. ಬಿಎಂಟಿಸಿ ಚಾಲಕರಿಗೆ ಡ್ರೈವಿಂಗ್ ನಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ ಎಂದು ಸುತ್ತೋಲೆ ಕೊಟ್ರೂ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಮೊಬೈಲ್ ಇಟ್ಟುಕೊಳ್ಳದಂತೆ ಇದೀಗ ಖಡಕ್ ಆದೇಶ ನೀಡಲಾಗಿದೆ.
Advertisement
ಫೋನ್ ಬಳಕೆಯಿಂದ ಆಕ್ಸಿಡೆಂಟ್ ಪ್ರಕರಣ ಹೆಚ್ಚಾಗಿರೋದಕ್ಕೆ ಈ ಕಠಿಣ ಕ್ರಮಕೈಗೊಳ್ಳಲಾಗಿದೆ. ಒಂದು ವೇಳೆ ಆದೇಶ ಮೀರಿ ನಡೆದುಕೊಂಡರೆ ಕೆಲಸದಿಂದಲೇ ಅಮಾನತು ಮಾಡಲಾಗುತ್ತದೆ ಎಂದು ಇಲಾಖೆ ಎಚ್ಚರ ನೀಡಿದೆ. ನವೆಂಬರ್ 15 ರಿಂದ ಈ ಹೊಸ ಕಾಯ್ದೆ ಬಿಎಂಟಿಸಿ ಚಾಲಕರಿಗೆ ಅನ್ವಯವಾಗಲಿದೆ ಎಂಬುದಾಗಿ ಇಲಾಖೆ ತಿಳಿಸಿದೆ.
Advertisement
Advertisement
ಆದೇಶದಲ್ಲಿ ಏನಿದೆ?
1. ಬೆಂ.ಮ.ಸಾ.ಸಂಸ್ಥೆಯ ಚಾಲಕರು ಸಂಸ್ಥೆಯ ಬಸ್ಸುಗಳನ್ನು ಚಾಲನೆ ಮಾಡುವಾಗ ಮೊಬೈಲ್ ಬಳಸುವುದನ್ನು ಮತ್ತು ಮೊಬೈಲ್ ಇಟ್ಟುಕೊಳ್ಳುವುದನ್ನು ನವೆಂಬರ್ 15 ರಿಂದ ಜಾರಿಗೆ ಬರುವಂತೆ ಕಡ್ಡಾಯವಾಗಿ ನಿಷೇದಿಸಲಾಗಿದೆ.
Advertisement
2. ಬಸ್ ಚಾಲನೆ ಮಾಡುವಾಗ ಚಾಲಕರು ಅವರ ಶರ್ಟ್, ಪ್ಯಾಂಟ್ ಅಥವಾ ಅಕ್ಕಪಕ್ಕದಲ್ಲಿ ಅಂದರೆ ಅವರ ಸುತ್ತಮುತ್ತ ಮೊಬೈಲ್ ಇಟ್ಟುಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ.
3. ಚಾಲಕರು ಬಸ್ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು ಕಂಡು ಬಂದಲ್ಲಿ ಅಂತಹ ಚಾಲಕರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು/ ಕಠಿಣ ಶಿಕ್ಷಾದೇಶವನ್ನು ಹೊರಡಿಸಲಾಗುವುದು.
4. ಒಂದು ವೇಳೆ ಚಾಲಕರು ಕೆಲಸಕ್ಕೆ ಬರುವಾಗ ಅವರು ಮೊಬೈಲ್ನ್ನು ತಂದಿದ್ದ ಪಕ್ಷದಲ್ಲಿ ಅದನ್ನು ಸ್ವಿಚ್ ಆಫ್ ಮಾಡಿ ಅವರ ಬಾಕ್ಸ್ ನಲ್ಲಿಟ್ಟು ಲಾಕ್ ಮಾಡಿ ನಂತರ ಕರ್ತವ್ಯದ ಮೇಲೆ ಹೋಗುವುದು. ಇದನ್ನು ಘಟಕದ ಮುಖ್ಯ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಅವಶ್ಯ ಪರಿಶೀಲಿಸುವುದು. ಒಂದು ವೇಳೆ ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಲ್ಲಿ, ಅದನ್ನು ಸಹ ಹಿಂಪಡೆಯಲಾಗುವುದು.
5. ಅದೇ ರೀತಿ, ನಿರ್ವಾಹಕರು ಸಹ ಕರ್ತವ್ಯದ ಮೇಲೆ ಇರುವಾಗ ಯಥೇಚ್ಚವಾಗಿ ಮೊಬೈಲ್ ಬಳಸುತ್ತಿರುವುದನ್ನು ಗಮನಿಸಲಾಗಿದೆ. ಇದರಿಂದ ನಿರ್ವಾಹಕರು ಪ್ರಯಾಣಿಕರನ್ನು ಕರೆದು ಹತ್ತಿಸಿಕೊಳ್ಳುವುದು, ಪ್ರಯಾಣಿಕರಿಗೆ ಸಕಾಲದಲ್ಲಿ ಚೀಟಿ ನೀಡುವುದು, ಚಿಲ್ಲರೆ ನೀಡುವುದು, ಅವರಿಗೆ ಮಾರ್ಗದರ್ಶನ ನೀಡುವುದು ಇತ್ಯಾದಿ ಕೆಲಸ ಕಾರ್ಯಗಳ ಸಮರ್ಪಕ ನಿರ್ವಹಣೆಗೆ ಅಡಚಣೆ ಆಗುತ್ತಿರುವುದು ಕಂಡು ಬಂದಿದೆ. ಆದುದರಿಂದ ನಿರ್ವಾಹಕರು ಸಹ ಕರ್ತವ್ಯದ ಸಮಯದಲ್ಲಿ ಮೊಬೈಲ್ ಬಳಸಬಾರದು. ಆದರೆ ನಿರ್ವಾಹಕರು ಮೊಬೈಲ್ ಇಟ್ಟುಕೊಳ್ಳಲು ಮಾತ್ರ ಅವಕಾಶ ಕಲ್ಪಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews