ಬೆಂಗಳೂರು: ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದ ಬಿಎಂಟಿಸಿ ಚಾಲಕರೊಬ್ಬರು ಜಿರಳೆ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಧು ಆತ್ಮಹತ್ಯೆಗೆ ಯತ್ನಿಸಿದ ಬಿಎಂಟಿಸಿ ಚಾಲಕ. ಇವರು ಬೆಂಗಳೂರಿನ ಶಾಂತಿ ನಗರದ ಡಿಪೋದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಕೆಲಸಕ್ಕೆ ಬಂದ ಮಧು ಅವರಿಗೆ ಡಿಪೋ ಮ್ಯಾನೇಜರ್ ಪ್ರಕಾಶ್ ಕೆಲಸ ನೀಡದೆ ಮೆಮೋ ಕೊಟ್ಟು ಮನೆಗೆ ಕಳುಹಿಸಿದ್ದರು.
Advertisement
ಹೀಗಾಗಿ ಮನನೊಂದ ಮಧು ನಿನ್ನೆ ರಾತ್ರಿ ಜಿರಳೆ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಧು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಇಂದು ಮೇಲಾಧಿಕಾರಿಗಳ ಕಿರುಕುಳ ಖಂಡಿಸಿ ಡಿಪೋ 2 ಮತ್ತು 3 ದಿಂದ ಯಾವುದೇ ಬಸ್ ಗಳನ್ನು ಹೊರಗೆ ತೆಗೆಯದೇ ಪ್ರತಿಭಟನೆ ನಡೆಸುತ್ತಿದ್ದಾರೆ.