ಬೆಂಗಳೂರು: ಬಿಎಂಟಿಸಿ (BMTC) ಚಾಲಕನೊಬ್ಬ ಮದ್ಯಪಾನ ಮಾಡಿ ಬಸ್ ಚಾಲನೆ (Drunk and Drive ) ಮಾಡಿದ ಘಟನೆ ನಗರದಲ್ಲಿ (Bengaluru) ನಡೆದಿದೆ. ಈ ವೇಳೆ ಪ್ರಶ್ನಿಸಿದ ಮಹಿಳೆಯ ಜೊತೆ ಚಾಲಕ ವಾಗ್ವಾದ ನಡೆಸಿದ್ದಾನೆ.
ಮಾ. 18ರ ರಾತ್ರಿ 7:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಹತ್ತಿರ ಈ ಘಟನೆ ನಡೆದಿದೆ. ಚಾಲಕ ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ಬಸ್ ಚಲಾಯಿಸುತ್ತಿದ್ದ. ಚಾಲಕನ ವರ್ತನೆ ಕಂಡು ಬಸ್ ನಿಲ್ಲುಸುವಂತೆ ಮಹಿಳೆ ಕೇಳಿಕೊಂಡಿದ್ದರು. ಆದರೆ ಮಹಿಳೆ ಜೊತೆ ಚಾಲಕ ವಾಗ್ವಾದ ಮಾಡಿದ್ದಾನೆ. ಇದನ್ನೂ ಓದಿ: ಕುಡಿದು ಬರುತ್ತಿದ್ದ ಡ್ರೈವರ್‌ಗಳಿಗೆ ಲಂಚ ಪಡೆದು ಡ್ಯೂಟಿ – BMTC ಡಿಪೋ ಮ್ಯಾನೇಜರ್ ಸೇರಿ 9 ಮಂದಿ ಅಮಾನತು
KA – 57 – F – 3660 ರಿಜಿಸ್ಟ್ರೇಷನ್ ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ವಾಗ್ವಾದ ನಡೆದಿದೆ. ಬಸ್ ಚಾಲಕನ ವರ್ತನೆ ಕಂಡು ವಿಡಿಯೋ ಸೆರೆ ಹಿಡಿದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಬಸ್ ನಿಲ್ಲಿಸಿ BMTC ಚಾಲಕರಿಬ್ಬರ ಕಿತ್ತಾಟ – ವಿಡಿಯೋ ಹರಿಬಿಟ್ಟ ಪ್ರಯಾಣಿಕರು

