ಬೆಂಗಳೂರು: ಬಿಎಂಟಿಸಿ (BMTC) ನಿರ್ವಾಹಕ ಮತ್ತು ಚಾಲಕ ಬಸ್ಸಿನಲ್ಲೇ ಜಗಳ ಮಾಡಿದ ಘಟನೆ ಹೆಬ್ಬಾಳ ಫ್ಲೈಓವರ್ (Hebbal Flyover) ಬಳಿ ನಡೆದಿದೆ.
ಬಸ್ಸು ನಿಲ್ಲಿಸಿ ನಿನ್ನ ಮಾತನ್ನು ನಾನ್ಯಾಕೆ ಕೇಳಬೇಕು ಎಂದು ಚಾಲಕ, ನಿರ್ವಾಹಕ ಪರಸ್ಪರ ಕಿತ್ತಾಡಿದ್ದಾರೆ. ಇಬ್ಬರು ಜಗಳ ಜೋರಾಗುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ. ಇದನ್ನೂ ಓದಿ: ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್
View this post on Instagram
ಇಬ್ಬರ ಜಗಳವನ್ನು ಪ್ರಯಾಣಿಕರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಬ್ಬರು ಕಿತ್ತಾಟ ನಡೆಸಿದ್ದು ಯಾಕೆ? ಗಲಾಟೆ ನಡೆದಿದ್ದು ಯಾವಾಗ ಎನ್ನುವುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.