ಬೆಂಗಳೂರು: ಬಿಎಂಟಿಸಿ ಬಸ್ ದರ ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ದರ ಇಳಿಕೆ ಮಾಡಿದ್ದೀವಿ ಅಂತಿರೋ ಬಿಎಂಟಿಸಿ, ದರ ಏರಿಕೆಯನ್ನೂ ಸಹ ಮಾಡಿದೆ.
ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕೋ ನಿಟ್ಟಿನಲ್ಲಿ, ಬಿಎಂಟಿಸಿ ಸಾಮಾನ್ಯ ಬಸ್‍ಗಳಲ್ಲಿ ಎರಡನೇ ಹಂತದ ಪ್ರಯಾಣಿಕರಿಗೆ 12 ರೂಪಾಯಿ ಇದ್ದ ದರವನ್ನು 10 ರೂಪಾಯಿಗೆ ಇಳಿಕೆ ಮಾಡಿದೆ. ಚಿಲ್ಲರೆ ಸಮಸ್ಯೆ ಸರಿದೂಗಿಸೋ ನಿಟ್ಟಿನಲ್ಲಿ ಎರಡು ರೂಪಾಯಿ ಕಡಿಮೆ ಮಾಡಿದ್ರೆ, ಮೂರು ಹಾಗೂ ಆರನೇ ಹಂತದಲ್ಲಿ ಇದೇ ಚಿಲ್ಲರೆ ನೆಪದಲ್ಲಿ ಮೂರು ಹಂತಗಳಲ್ಲಿ 1 ರೂಪಾಯಿ ದರ ಹೆಚ್ಚಿಸಲಾಗಿದೆ.
Advertisement
ಒಂದಷ್ಟು ಪ್ರಯಾಣಿಕರಿಗೆ ಪರಿಷ್ಕೃತ ದರ ವರವಾದ್ರೆ ಮತ್ತೊಂದಷ್ಟು ಪ್ರಯಾಣಿಕರಿಗೆ ಏರಿಕೆಯ ಬಿಸಿ ತಟ್ಟಿದೆ. ಬಿಎಂಟಿಸಿ ಪರಿಷ್ಕೃತ ದರ ಹೀಗಿದೆ.
Advertisement
ಬಿಎಂಟಿಸಿ ದರ ಇಳಿಕೆ-ಏರಿಕೆ
# ಸಾಮಾನ್ಯ ಬಸ್: 12 ರೂ. ಟಿಕೆಟ್ ದರ 10 ರೂಪಾಯಿಗೆ ಇಳಿಕೆ
# ಸಾಮಾನ್ಯ ಬಸ್: 3,6,9 ಸ್ಟೇಜ್‍ಗಳಲ್ಲಿ ಒಂದು ರೂಪಾಯಿ ಹೆಚ್ಚಳ
# 3ನೇ ಹಂತ ದರ 14 ರೂ.ನಿಂದ 15 ರೂಪಾಯಿಗೆ ಏರಿಕೆ
# 6ನೇ ಹಂತ ದರ 19 ರೂ.ನಿಂದ 20 ರೂಪಾಯಿಗೆ ಏರಿಕೆ
# 9ನೇ ಹಂತ ದರ 21 ರೂ. ನಿಂದ 22 ರೂಪಾಯಿಗೆ ಏರಿಕೆ
# ಎಲ್ಲ ಹವಾನಿಯಂತ್ರಿತ ಬಸ್: ವೋಲ್ವೋ ಬಸ್‍ಗಳಲ್ಲಿ ಎಲ್ಲಾ ಹಂತದಲ್ಲೂ 5 ರೂಪಾಯಿ ದರ ಇಳಿಕೆ
Advertisement
ಸಾಮಾನ್ಯ ಬಸ್‍ಗಳಲ್ಲಿ ದರ ಇಳಿಕೆ ಮಾಡಿರೋದಾಗಿ ಹೇಳ್ತಿರೋ ಬಿಎಂಟಿಸಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಂಡು ಕಾಣದ ಹಾಗೆ ದರ ಏರಿಕೆ ಬರೆ ಹಾಕಿದೆ. ಪರಿಷ್ಕೃತ ದರ ಏಪ್ರಿಲ್ 14ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ,
Advertisement
ಇದನ್ನೂ ಓದಿ: ಮೇ 1 ರಿಂದ ಈ 5 ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಆಗುತ್ತೆ