ಹಿಂದೆ ಹೋಗು ಎಂದಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ ಹೊಟ್ಟೆಗೆ ಚಾಕು ಇರಿದ ಯುವಕ

Public TV
1 Min Read
BMTC CRIME

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ (BMTC) ವೋಲ್ವೋ ಬಸ್ ಕಂಡಕ್ಟರ್‌ಗೆ ಪ್ರಯಾಣಿಕನೊಬ್ಬ ಚಾಕು ಇರಿದ ಪ್ರಕರಣ ನಗರದಲ್ಲಿ (Bengaluru) ನಡೆದಿದೆ.

ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ವೈದೇಹಿ ಬಸ್ ನಿಲ್ದಾಣದ ಬಳಿ ಯುವಕನೊಬ್ಬ ವೋಲ್ವೋ ಬಸ್ ಹತ್ತಿದ್ದಾನೆ. ಬಸ್ ಹತ್ತಿದವನು ಒಳಗಡೆ ಹೋಗದೆ ಡೋರ್ ಸಮೀಪ ನಿಂತಿದ್ದಾನೆ. ಈ ವೇಳೆ ಕಂಡಕ್ಟರ್ ಯೋಗಿಶ್ ಯುವಕನಿಗೆ ಒಳಗಡೆ ಹೋಗುವಂತೆ ಸೂಚಿಸಿದ್ದಾರೆ. ಅಷ್ಟಕ್ಕೇ ಕೋಪಗೊಂಡಿರುವ ಯುವಕ ಕಂಡಕ್ಟರ್ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಎರಡು ಮೂರು ಬಾರಿ ಇರಿದ್ದಾನೆ.

ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ಭಯಭೀತರಾಗಿ ಚಿರಾಡಿದಾಗ ಯುವಕ ಇಳಿದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಬಳಿಕ ಬಸ್‍ನಲ್ಲಿದ್ದ ಪ್ರಯಾಣಿಕರು 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಘಟನ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಆಗಮಿಸಿ ಕಂಡಕ್ಟರ್ ಯೋಗಿಶ್ ಅವರನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಾಕು ಇರಿದಿದ್ದ ಯುವಕನ್ನ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆರೋಪಿ ಹರಿಸಿಂಹ ಜಾರ್ಖಂಡ್ ಮೂಲದವನು ಎಂದು ತಿಳಿದು ಬಂದಿದೆ.

Share This Article