-ಚಿಲ್ಲರೆ ಕೊಡೆದೆ 3 ವರ್ಷದ ಮಗುವಿನ ಚಾರ್ಜ್ ಎಂದ ಕಂಡಕ್ಟರ್
ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ದರ್ಪ ದಿನೇ ದಿನೇ ಜಾಸ್ತಿಯಾಗ್ತಿದೆ. ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸಿ ಸ್ಟಾಪ್ ಬಂದ್ರೂ ಡೋರ್ ತೆಗೆಯದೆ, ಚಲಿಸುತ್ತಿರುವ ಬಸ್‍ನಿಂದ ಮಹಿಳೆಯನ್ನು ದೂಡಿದ ಘಟನೆ ಮಾಸುವ ಮುನ್ನವೇ ಅಂತಹದೇ ಘಟನೆ ಶನಿವಾರ ರಾತ್ರಿ ನಡೆದಿದೆ.
ಮಹಿಳೆಯರು ರಾತ್ರಿಹೊತ್ತು ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಸುವುದು ಸೇಪ್ ಅಲ್ಲ ಅನ್ನೋದಕ್ಕೆ ರಾತ್ರಿ ನಡೆದ ಘಟನೆ ನಿದರ್ಶನವಾಗಿದೆ. ಬಿಎಂಟಿಸಿ ಕಂಡಕ್ಟರ್, ಚಿಲ್ಲರೆ ವಿಚಾರವಾಗಿ ಗಲಾಟೆ ಮಾಡಿ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
Advertisement
Advertisement
ನಡೆದಿದ್ದೇನು?: ನಿನ್ನೆ ರಾತ್ರಿ ಸಪ್ತಗಿರಿ ಆಸ್ಪತ್ರೆಯಿಂದ ಮೆಜೆಸ್ಟಿಕ್‍ಗೆ ಲಕ್ಷ್ಮೀ ಎಂಬ ಮಹಿಳೆ 250ಜೆ ಬಸ್‍ನಲ್ಲಿ ತನ್ನ ಪುಟ್ಟಮಗುವಿನೊಂದಿಗೆ ಬಂದಿದ್ದಾರೆ. 21 ರೂ. ಟಿಕೇಟ್‍ಗೆ 101 ರೂಪಾಯಿ ನೀಡಿದ್ರು, ಕಂಡಕ್ಟರ್ ಇಳಿಯುವಾಗ ಚಿಲ್ಲರೆ ಕೊಡ್ತೀನಿ ಅಂದಿದ್ರು. ಅಂತೆಯೇ ಇಳಿಯುವಾಗ 80 ಚಿಲ್ಲರೆ ಕೊಡುವ ಬದಲು 74 ಮಾತ್ರ ನೀಡಿದ್ದ. ಇದರಿಂದ ಮಹಿಳೆ ಯಾಕೆ ಇನ್ನು ಆರು ರೂಪಾಯಿ ಚಿಲ್ಲರೆ ಕೊಡಿ ಅಂತಾ ಕೇಳಿದ್ರೆ ಆರು ರೂಪಾಯಿಗೆ ಇಷ್ಟೆಲ್ಲಾ ಮಾತಾಡ್ತೀಯಾ, ಮಗುವಿನ ಚಾರ್ಜ್ ಅದು ಅಂತಾ ಹೇಳಿದ್ದಾನೆ. ಮಾತ್ರವಲ್ಲದೇ ಮೂರು ವರ್ಷದ ಮಗುವಿಗೆ ಯಾವ ಚಾರ್ಜಿಲ್ಲಾ ಅಂದಾಗ ಮಾತಿಗೆ ಮಾತು ಬೆಳೆದು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.
Advertisement
ಘಟನೆ ಸಂಬಂಧ ಉಪ್ಪಾರ್‍ಪೇಟೆ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ಬಿಎಂಟಿಸಿ ಕಂಡಕ್ಟರ್ ಉದಯ್ ಕುಮಾರ್‍ನನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರ ಸೇವೆ ಮಾಡೋ ಬಿಎಂಟಿಸಿಯಲ್ಲಿ ಇತಂಹ ಘಟನೆಗಳು ದಿನೆದಿನೇ ಹೆಚ್ಚಾಗ್ತಾನೇ ಇದೆ. ಇನ್ನಾದ್ರೂ ಸಾರಿಗೆ ಇಲಾಖೆಯವರು ತಮ್ಮ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ಕೊಡ್ತಾರ ಎಂಬವುದನ್ನು ಕಾದು ನೋಡಬೇಕು.