ತಪ್ಪಿತು ಭಾರೀ ದುರಂತ – ಆಕ್ಸೆಲ್ ಕಟ್, ಅಡ್ಡಾದಿಡ್ಡಿ ಸಂಚರಿಸಿದ ಬಿಎಂಟಿಸಿ ಬಸ್

Public TV
1 Min Read
vlcsnap 2022 05 20 17h07m18s859

ಬೆಂಗಳೂರು: ಬಿಎಂಟಿಸಿ ಬಸ್‍ವೊಂದರ ಆಕ್ಸೆಲ್ ರಾಡ್ ತುಂಡಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸಿದ ಘಟನೆ ನಗರದ ಓಕಳಿಪುರಂ ಅಂಡರ್ ಪಾಸ್ ಕೆಳಗಡೆ ನಡದಿದೆ.

vlcsnap 2022 05 20 17h07m01s397

ಮೆಜೆಸ್ಟಿಕ್‍ನಿಂದ ಪೀಣ್ಯ ಕಡೆಗೆ ಹೊರಟಿದ್ದ ಕೆಎ-01-ಎಫ್-4659 ನಂಬರ್‌ನ ಅಪಘಾತಕ್ಕಿಡಾದ ಬಿಎಂಟಿಸಿ ಬಸ್. ಬಸ್‍ನ ಆಕ್ಸೆಲ್ ರಾಡ್ ಪ್ರಯಾಣಿಕರೊಂದಿಗೆ ಪೀಣ್ಯ ಕಡೆಗೆ ಹೋಗುತ್ತಿದ್ದಾಗ ಅಚಾನಕ್ ಆಗಿ ತುಂಡಾಗಿದೆ. ಈ ವೇಳೆ ಬಸ್ ಡಿವೈಡರ್ ಮೇಲಕ್ಕೆ ಬಂದು ನಿಂತುಕೊಂಡಿದೆ. ಇದನ್ನೂ ಓದಿ:1 ವರ್ಷ ಜೈಲು ಶಿಕ್ಷೆ – ನ್ಯಾಯಾಲಯಕ್ಕೆ ಶರಣಾದ ಸಿಧು

Police Jeep

ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಬಸ್ಸಿನ ಎಲ್ಲಾ ಸೀಟುಗಳು ಭರ್ತಿ ಭರ್ತಿಯಾಗಿದ್ದು, ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

bmtc

ಘಟನೆ ಕುರಿತು ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಪೊಲೀಸರು ಹಾಗೂ ಬಿಎಂಟಿಸಿ ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *