ಬೆಂಗಳೂರು: ಭಾರತ್ ಬಂದ್ ಇರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ಸನ್ನು ಅವಲಂಬಿಸಿರುವ ಪ್ರಯಾಣಿಕರು ತಮ್ಮ ಕೈಯಲ್ಲಿ ಹೆಲ್ಮೆಟ್ ಹಿಡಿದುಕೊಂಡು ಸಿಲಿಕಾನ್ ಸಿಟಿಯಲ್ಲಿ ರೋಡ್‍ಗಿಳಿದಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್‍ವೊಬ್ಬರು ಹೆಲ್ಮೆಟ್ ಹಿಡಿದುಕೊಂಡು ರೋಡಿನಲ್ಲಿ ನಿಂತಿದ್ದಾರೆ. ನಾನು ಬೆಳಗ್ಗೆ ಏಳು ಗಂಟೆಗೆ ಜಾಲಹಳ್ಳಿ ಮನೆಯಿಂದ ಹೊರಟೆ. ಅಲ್ಲದೇ ಬಂದ್ ದಿನ ಬಸ್ ವ್ಯತ್ಯಯವಾಗಬಹುದು ಅಂತಾ ಕೈಯಲ್ಲಿ ಒಂದು ಹೆಲ್ಮೆಟ್ ತೆಗೆದುಕೊಂಡು ಬಂದೆ. ಆದರೆ ಪಾಪ ಅಲ್ಲಲ್ಲಿ ಸಾಕಷ್ಟು ಜನ ದ್ವಿಚಕ್ರ ವಾಹನದವರು ಡ್ರಾಪ್ ಕೊಡುತ್ತಿದ್ದಾರೆ. ಈಗ ನಂಗೆ ಬಸ್ ಸಿಗ್ತಿಲ್ಲ, ದ್ವಿಚಕ್ರ ವಾಹನವೂ ಕೂಡ ಸಿಗ್ತಿಲ್ಲ. ಜಿಎಸ್‍ಟಿ ಕೆಲಸ ಎಲ್ಲಾ ಮುಗಿಸಬೇಕಾಗಿದೆ. ಈ ಬಂದ್ ನಿಂದ ಯಾರಿಗೆ ಲಾಭ ಎಂದು ಕಿಡಿಕಾರಿದ್ದಾರೆ.
Advertisement
Advertisement
ಮಂಗಳವಾರದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ, ಕೆಎಸ್‍ಆರ್ ಟಿಸಿ ನಿರ್ಧರಿಸಿತ್ತು. ಆದರೆ ಕೆಲ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಹೀಗಾಗಿ ಬಹುತೇಕ ಬಸ್‍ಗಳು ಸಂಚಾರವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳು ಬಸ್‍ಗಳಿಲ್ಲದೆ ಪರದಾಟ ನಡೆಸುತ್ತಿದ್ದಾರೆ.
Advertisement
ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡದೇ ಇರುವುದರಿಂದ ಬೆಳಗ್ಗೆ ಬಸ್ ಇತ್ತು ಎಂದು ವಿದ್ಯಾರ್ಥಿಗಳು ಕಾಲೇಜ್ ಗೆ ಬಂದಿದ್ದರು. ಆದರೆ ಈಗ ಕಾಲೇಜು ರಜೆ ಘೋಷಣೆ ಮಾಡಿದೆ. ಹಾಗಾಗಿ ವಿದ್ಯಾರ್ಥಿಗಳು ಮನೆಗೆ ವಾಪಾಸ್ ಹೋಗುವುದಕ್ಕೆ ಬಸ್ ಇಲ್ಲದೆನಿಲ್ದಾಣದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
Advertisement
https://www.youtube.com/watch?v=Boi_fgZKdzI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv