ಬಿಬಿಎಂಪಿ ಕಾರ್ಮಿಕರಿಗೆ ಬಿಎಂಟಿಸಿ ಬಸ್ ಡಿಕ್ಕಿ – ಇಬ್ಬರಿಗೆ ಗಂಭೀರ ಗಾಯ

Public TV
1 Min Read
Accident

ಬೆಂಗಳೂರು: ಐವರು ಬಿಬಿಎಂಪಿ (BBMP) ಕಾರ್ಮಿಕರಿಗೆ ಬಿಎಂಟಿಸಿ (BMTC) ಬಸ್ ಡಿಕ್ಕಿಯಾದ ಘಟನೆ ಮೆಜೆಸ್ಟಿಕ್‍ನ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಡೆದಿದೆ.

ಬಸ್ ಮೆಜೆಸ್ಟಿಕ್‍ನಿಂದ ಹೆಬ್ಬಾಳದ ಕಡೆಗೆ ಹೋಗುತ್ತಿತ್ತು. ಈ ವೇಳೆ, ಡಿವೈಡರ್‌ಗೆ ಡಿಕ್ಕಿಯಾಗಿ, ಬಳಿಕ ಕಾರ್ಮಿಕರಿಗೆ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರ ಸ್ಥಿತಿ ಗಂಭೀರವಾಗಿದೆ. ಓರ್ವ ಕಾರ್ಮಿಕನ ಬೆನ್ನು ಮೂಳೆಗೆ ಹೊಡೆತ ಬಿದ್ದಿದ್ದು, ಹಲ್ಲು ಮುರಿತವಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಉತ್ತರ ಪ್ರದೇಶ ಮೂಲದ ಶಮಿಮ್ (23) ಹಾಗೂ ಹುಸೇನ್ (35) ಎಂದು ಗುರುತಿಸಲಾಗಿದೆ. ಇವರು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ತೆರಳಿದ್ದಾರೆ. ಇನ್ನುಳಿದ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಾಕಿಸ್ತಾನದ HQ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಕೇಂದ್ರಗಳೇ ಉಡೀಸ್‌

ಬಸ್ ನಾಗೇನಹಳ್ಳಿ ಕಡೆಗೆ ಹೋಗುತ್ತಿರಬೇಕಾದರೆ ಸಂಗೊಳ್ಳಿ ರಾಯಣ್ಣ ಸರ್ಕಲ್‍ನ ಡಿವೈಡರ್‌ಗೆ ಡಿಕ್ಕಿಯಾಗಿದೆ. ಇದರಿಂದ ಸರ್ಕಲ್‍ನ ಗ್ರಿಲ್ ಹಾಗೂ ಒಂದು ವಿದ್ಯುತ್ ಕಂಬ ಜಖಂ ಆಗಿದೆ. ಬಸ್ಸಿನ ಮುಂಭಾಗ ಸಹ ಜಖಂ ಆಗಿದೆ. ಬಸ್‍ನ ಚಾಲಕ ಹಾಗೂ ನಿರ್ವಾಹಕರಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾರೆ.

ಬಸ್ ಚಾಲಕ ನಿದ್ರೆ ಮಂಪರಿನಲ್ಲಿದ್ದ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಕ್ರೇನ್ ಮೂಲಕ ಬಸ್‍ನ್ನು ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು – ಖರ್ಗೆ ಅಸಮಾಧಾನ

Share This Article