5 ರೂ. ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ಆರೋಪ – ಬಿಎಂಟಿಸಿ ಕಂಡಕ್ಟರ್‌ ಅಮಾನತು

Public TV
1 Min Read
BMTC

ಬೆಂಗಳೂರು: 5 ರೂಪಾಯಿ ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಎಂಟಿಸಿ (BMTC) ಕಂಡಕ್ಟರ್‌ ಅಮಾನತಾಗಿರುವ ಘಟನೆ ನಡೆದಿದೆ.

ಆ.6 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಯಾಣಿಕ ಅಭಿನವ್‌ ರಾಜ್‌ ಹಲ್ಲೆಗೊಳಗಾದ ವ್ಯಕ್ತಿ. ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ: ವಿಪಕ್ಷಗಳಿಗೆ ಕೆ.ಹೆಚ್.ಮುನಿಯಪ್ಪ ಟಾಂಗ್‌

Chikkaballapur bmtc

ಪ್ರಯಾಣಿಕ ಕೆ.ಆರ್‌ ಪುರಂ ರೈಲ್ವೆ ನಿಲ್ದಾಣದಿಂದ ಮಾರತ್ತಹಳ್ಳಿ ಕಲಾಮಂದಿರಕ್ಕೆ ಟಿಕೆಟ್‌ ತೆಗೆದುಕೊಂಡಿದ್ದ. ಟಿಕೆಟ್‌ ದರ 15 ರೂ. ಇತ್ತು. ಆತ 20 ರೂ. ಕೊಟ್ಟಿದ್ದ. ಬಾಕಿ 5 ರೂ. ವಾಪಸ್‌ ಕೇಳಿದ್ದಕ್ಕೆ ಕಂಡಕ್ಟರ್‌ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಕಂಡಕ್ಟರ್‌ನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಬಿಎಂಟಿಸಿ, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುವುದು ಸುರಕ್ಷಿತ ಎನ್ನುವ ಭಾವನೆ ಉಂಟಾಗಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರ ಮೇಲೆ ಯಾವುದೇ ತರಹದ ದೌರ್ಜನ್ಯ, ಅಸಭ್ಯ ವರ್ತನೆ, ಅಹಿತಕರ ಘಟನೆಗಳು ಕಂಡುಬಂದಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಾಸಿಗಾಗಿ ಸಿಡಿಆರ್ ಸೇಲ್‌ ಮಾಡ್ತಿದ್ದ ಪೊಲೀಸಪ್ಪ ಅರೆಸ್ಟ್ – ಎಸ್‌ಐ ಸಿಡಿಆರ್ ತೆಗೆದು ಪತ್ನಿಗೆ ನೀಡಿರೊ ಆರೋಪ?

Share This Article