ಬೆಂಗಳೂರು: ಬೈಕ್‌ಗೆ ಹಿಂಬದಿಯಿಂದ ಬಿಎಂಟಿಸಿ (BMTC) ಬಸ್ ಡಿಕ್ಕಿ ಹೊಡದ ಪರಿಣಾಮ ಮೂರು ವರ್ಷದ ಮಗು (Child) ಸ್ಥಳದಲ್ಲೇ ಸಾವನ್ನಪಿರುವ ಘಟನೆ ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್‌ನಲ್ಲಿ ನಡೆದಿದೆ.
ಅಯಾನ್ (3) ಮೃತಪಟ್ಟ ಮಗು. ಬೆಂಗಳೂರಿನ ಗಾರೇಪಾಳ್ಯ ಜಂಕ್ಷನಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಮಗು ದೊಡ್ಡಮ್ಮನ ಜೊತೆ ವಾಸವಾಗಿತ್ತು. ಭಾನುವಾರ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭ ಹಿಂಬಂದಿಯಿಂದ ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮಗು ಕೆಳಗಡೆ ಬಿದ್ದಿದೆ. ಇದನ್ನೂ ಓದಿ: ಬೆಳಗಾವಿ ಹಿಂಡಲಗಾ ಜೈಲಿಗೆ ಬಾಂಬ್ ಬೆದರಿಕೆ ಕರೆ!
ಮಗು ಕೆಳಗಡೆ ಬೀಳುತ್ತಿದ್ದಂತೆ ಬಿಎಂಟಿಸ್ ಬಸ್ಸಿನ ಚಕ್ರ ಮಗುವಿನ ಮೇಲೆ ಹರಿದಿದೆ. ಘಟನೆಯಿಂದ ಮೂರು ವರ್ಷದ ಗಂಡು ಮಗು ಸ್ಥಳದಲ್ಲೇ ಮೃತ ಪಟ್ಟಿದೆ. ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಬಿಎಂಟಿಸಿ ಬಸ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ – ಒಂದೇ ಕುಟುಂಬದ ಐವರು ಸಾವು!
ಕಳೆದ ವಾರವಷ್ಟೇ ಯುವಕನೊಬ್ಬ ಬಿಎಂಟಿಸಿ ಬಸ್ಸಿಗೆ ಬಲಿಯಾಗಿದ್ದ. ಓವರ್ ಟೇಕ್ ಮಾಡುವಾಗ ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನ ಅಟ್ಟೂರಿನ ಬಳಿಯ ಮದರ್ ಡೈರಿ ಬಳಿ ನಡೆದಿತ್ತು. ವೇಗವಾಗಿ ಬರುತ್ತಿದ್ದ ಬಸ್ಸನ್ನು ಭರತ್ ರೆಡ್ಡಿ ಎಂಬಾತ ಓವರ್ ಟೇಕ್ ಮಾಡಿದ್ದು, ಬೈಕ್‌ನಿಂದ ಕೆಳಗೆ ಬಿದ್ದು ಬಸ್ ಹರಿದಿತ್ತು. ಘಟನೆ ಬಳಿಕ ಸ್ಥಳದಿಂದ ಬಸ್ ಚಾಲಕ ಪರಾರಿಯಾಗಿದ್ದನು. ಇದನ್ನೂ ಓದಿ: ಡ್ಯಾನ್ಸ್ ವಿಚಾರಕ್ಕೆ ಗಲಾಟೆ- ಓರ್ವ ಸಾವು, ಮೃತನ ತಾಯಿಗೂ ಚಾಕು ಇರಿತ
Web Stories