ಬೆಂಗಳೂರು: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಿಎಂಟಿಸಿ ಬಸ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ನಡೆದಿದೆ.
ಸೌತ್ ಎಂಡ್ ಸರ್ಕಲ್ ಆಗಿ ಕನಕಪುರಕ್ಕೆ ಹೋಗುತ್ತಿದ್ದ ಅಂಜನಾಪುರದ ಡಿಪೋ 44ರ ಬಿಎಂಟಿಸಿ ಬಸ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬಸ್‍ನಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಹೀಗಾಗಿ ಪ್ರಾಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: 40 ಮಂದಿ ಪ್ರಯಾಣಿಕರಿದ್ದ BMTC ಬಸ್ ಧಗ ಧಗ
ಬಸ್‍ನಿಂದ ಜನ ಕೆಳಗಿಳಿಯುತ್ತಿದ್ದಂತೆ ಬೆಂಕಿ ಬಸ್ ತುಂಬಾ ಆವರಿಸಿಕೊಂಡಿದೆ. ಬೆಂಕಿ ನಂದಿಸಲು ಚಾಲಕ, ನಿರ್ವಾಹಕ ಸೇರಿ ಸ್ಥಳೀಯರು ಪ್ರಯತ್ನಿಸಿದರು ಕೂಡ, ಕ್ಷಣ ಮಾತ್ರದಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?
ಬೆಂಗಳೂರಿನಲ್ಲಿ ಕಳೆದ ಎರಡುವಾರಗಳ ಹಿಂದೆ ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ಬಿಎಂಟಿಸಿ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದೀಗ ಇಂದು ಇನ್ನೊಂದು ಬಿಎಂಟಿಸಿ ಬಸ್ ಬೆಂಕಿ ಕಾಣಿಸಿಕೊಂಡು ಸುಟ್ಟುಹೋಗಿದೆ.