ಬೆಂಗಳೂರು: ಬಿಎಂಟಿಸಿ ಬಸ್ (BMTC Bus) ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರು (Bengaluru) ವಿವಿ ವಿದ್ಯಾರ್ಥಿನಿ (Student) ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ಶಿಲ್ಪಾ(22) ಮೃತ ವಿದ್ಯಾರ್ಥಿನಿ. ಕೋಲಾರ (Kolar) ಮೂಲದ ವಿದ್ಯಾರ್ಥಿನಿ ಶಿಲ್ಪಾ ಮೊದಲ ವರ್ಷದ ಉನ್ನತ ವ್ಯಾಸಾಂಗ ಮಾಡುತ್ತಿದ್ದಳು. ಬೆಂಗಳೂರಿನ ಜ್ಞಾನಭಾರತಿ ಯುನಿವರ್ಸಿಟಿ ಬಳಿ ಅಕ್ಟೋಬರ್ 10ರಂದು ಬಸ್ ಹತ್ತುವಾಗ ವಿದ್ಯಾರ್ಥಿನಿ ಶಿಲ್ಪಾ ಕೆಳಗೆ ಬಿದ್ದಿದ್ದಳು. ಈ ವೇಳೆ ಆಕೆಯ ಮೇಲೆ ಬಸ್ ಹತ್ತಿತ್ತು. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಶಿಲ್ಪಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Advertisement
Advertisement
ಬನ್ನೇರು ಘಟ್ಟದ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಇಂದು ಬೆಳಗಿನ ಜಾವ 4 ಘಂಟೆ ಸುಮಾರಿಗೆ ಚಿಕಿತ್ಸೆ ಫಲಕರಿಸದೇ ಶಿಲ್ಪಾಶ್ರೀ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕೋಲಾರದ ಬಂಗಾರಪೇಟೆಗೆ ರವಾನೆ ಮಾಡಲಾಗಿದೆ. ಅಲ್ಲೇ ಅಂತ್ಯ ಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ – ಬೋನ್‍ನಲ್ಲಿ ನಾಯಿಯನ್ನು ಕಟ್ಟಿ ಹಾಕಿ ಕಾವಲು
Advertisement
Advertisement
ವಿದ್ಯಾರ್ಥಿನಿ ಅಪಘಾತದ ಬಳಿಕ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ವಿವಿ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿದ್ದರು. ಯೂನಿವರ್ಸಿಟಿಯ ಎಲ್ಲಾ ಗೇಟ್ ಗಳನ್ನು ಬೀಗ ಹಾಕಿ ಧರಣಿ ನಡೆಸಿದ್ದರು. ಶಿಲ್ಪಾ ನಿಧನದ ಹಿನ್ನೆಲೆಯಲ್ಲಿ ಸ್ಟೂಡೆಂಟ್ ಯೂನಿಯನ್ ನ ಚಂದ್ರುಪೆರಿಯರ್ ಮಾತನಾಡಿ, ಸರ್ಕಾರ ಮಾತು ಕೊಟ್ಟಿತ್ತು. ತಾತ್ಸರ ಮಾಡೋದು ಬೇಡ. ಶಿಲ್ಪಾಶ್ರೀಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ವೈದ್ಯಕೀಯ ಖರ್ಚು, ಹಾಗೂ ಕುಟುಂಬಕ್ಕೂ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಸರ್ಕಾರ ತಾತ್ಸರ ಮಾಡಿದೆ. ಇವರೆಗೆ ವೈದ್ಯಕೀಯ ಖರ್ಚು ಬಿಎಂಟಿಸಿ ಆಡಳಿತ ನೋಡಿಕೊಂಡಿದೆ. ನಮ್ಮ ಭರವಸೆಗೆ ಸ್ಪಂದಿಸದಿದ್ದರೇ, ಹೋರಾಟಕ್ಕೆ ಇಳಿಯುತ್ತೇವೆ. ಟೀಚರ್ಸ್ ಯೂನಿಯನ್‍ಗಳ ಜೊತೆ ಮಾತುಕತೆ ನಡೆಸಿ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆ ಅನುಮಾನಾಸ್ಪದ ಸಾವು