ಬೆಂಗಳೂರು: ಬಿಎಂಟಿಸಿ ಬಸ್ (BMTC Bus) ಅನ್ನು ಸಾಕಾನೆಗಳ ಹಿಂಡು ಅಡ್ಡಗಟ್ಟಿದೆ. ಗಜಪಡೆಯನ್ನು (Elephant) ನೋಡಿದ ಬಸ್‌ನಲ್ಲಿದ್ದ ಪ್ರಯಾಣಿಕರು ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಯಾರಿಗೆ ಏನೂ ಮಾಡದೇ ಗಜಪಡೆ ಅರಣ್ಯದೊಳಗೆ ನುಗ್ಗಿವೆ.
ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನದ ಸಾಕಾನೆಗಳ ಹಿಂಡು ಬೆಂಗಳೂರು (Bengaluru) ಹೊರವಲಯದ ಮುಖ್ಯರಸ್ತೆಗೆ ಲಗ್ಗೆಯಿಟ್ಟಿವೆ. ಪಾರ್ಕಿನ ಸಾಕಾನೆಗಳನ್ನ ಮೇಯಲು ಬಿಡಲಾಗಿತ್ತು. ಈ ವೇಳೆ ಕಾಡಂಚಿನ ಗ್ರಾಮಕ್ಕೆ ಬಂದು ಆತಂಕ ಸೃಷ್ಟಿಸಿತ್ತು. ಬೆಳಗ್ಗೆ 8 ಗಂಟೆ ಸುಮಾರಿಗೆ ಕಗ್ಗಲಿಪುರ ಸಮೀಪದ ಗುಲ್ಲಹಟ್ಟಿ ಕಾವಲ್ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗೆ ಆನೆಗಳು ಅಡ್ಡ ಬಂದಿವೆ. ಇದನ್ನು ನೋಡಿದ ಬಸ್ ಚಾಲಕ, ಬಸ್ ನಿಲ್ಲಿಸಿದ್ದು, ಪ್ರಯಾಣಿಕರು ಒಂದು ಕ್ಷಣ ಗಾಬರಿಗೆ ಒಳಗಾದರು. ಇದನ್ನೂ ಓದಿ: Explainer| ಏನಿದು ಪಬ್ಲಿಕ್ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಕೆಆರ್ ಮಾರ್ಕೆಟ್‌ನಿಂದ ಗುಳ್ಳಹಟ್ಟಿ ಕಾವಲ್‌ಗೆ ಬಸ್ ಹೊರಟಿತ್ತು. ಗುಲ್ಲಹಟ್ಟಿ ಗ್ರಾಮದ ಮುಖ್ಯರಸ್ತೆಯಲ್ಲಿ ಈ ಕಾಡಾನೆಗಳ ದಂಡು ಎಂಟ್ರಿಯಾಗಿತ್ತು. ಗ್ರಾಮದವರು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಎಂಟು ಸಾಕಾನೆಗಳನ್ನು ಬನ್ನೇರುಘಟ್ಟ ಅರಣ್ಯಕ್ಕೆ ಓಡಿಸಿದರು. ಬನ್ನೇರುಘಟ್ಟ ಕಾಡಿನೊಳಗೆ ಸಾಕಾನೆಗಳನ್ನ ಮೊನ್ನೆರಾತ್ರಿ ಮೇಯಲು ಬಿಡಲಾಗಿತ್ತು. ಅದೇ ಆನೆಗಳ ಹಿಂಡು ಬೆಳಗ್ಗೆ ಕಾಡಂಚಿನ ಗುಲ್ಲಹಟ್ಟಿ ಕಾವಲ್ ಗ್ರಾಮದ ಮುಖ್ಯರಸ್ತೆಗೆ ಬಂದಿವೆ. ಕಾಡಾನೆಗಳು ಅಂತ ಗಾಬರಿಪಟ್ಟಿದ್ದ ಗ್ರಾಮಸ್ಥರು, ಅರಣ್ಯಾಧಿಕಾರಿಗಳು ಮತ್ತೆ ಕಾಡಿಗೆ ಓಡಿಸುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯರಸ್ತೆಗೆ ಬಂದ ಗಜಪಡೆಯನ್ನ ನೋಡಿ, ಅರ್ಧ ಗಂಟೆಗೂ ಹೆಚ್ಚು ಕಾಲ ಬಿಎಂಟಿಸಿ ಪ್ರಯಾಣಿಕರು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ