ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ (BMTC) ಬಸ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಬಸ್ ಅಪಘಾತ (Bus Accident) ತಡೆಯಲು ಬಿಎಂಟಿಸಿ ಹೊಸ ಟೆಕ್ನಾಲಜಿಯ ಮೊರೆ ಹೋಗಿದೆ.
ಇತ್ತೀಚೆಗೆ ಮಹಿಳಾ ಸುರಕ್ಷತೆಗಾಗಿ ಸಿಸಿಟಿವಿ, ಪ್ಯಾನಿಕ್ ಬಟನ್ ಅಳವಡಿಸುವ ಕ್ರಮಕ್ಕೆ ಮುಂದಾಗಿದ್ದ ಬಿಎಂಟಿಸಿ ಈಗ ಬಸ್‌ಗಳಲ್ಲಿ ಅಡಾಸ್ (ADAS) ಅಂದ್ರೆ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಅಳವಡಿಕೆ ಮಾಡುತ್ತಿದೆ. ಇದನ್ನೂ ಓದಿ: ಸಿಎಂ ಸಂಧಾನ ಯಶಸ್ವಿ – ಅಧಿವೇಶನಕ್ಕೆ ಹೋಗ್ತೀನಿ, ಗ್ಯಾರಂಟಿಯಿಂದ ಅನುದಾನ ಸಿಗುತ್ತಿಲ್ಲ ಎಂದ ಬಿಆರ್ ಪಾಟೀಲ್
ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡಿರುವ ಈ ಡಿವೈಸ್ ಮುಂಭಾಗದಲ್ಲಿ ಬರುವ ವಾಹನಗಳ ಅಲರ್ಟ್ ಮಾಡುವ ಜೊತೆಗೆ, ಡ್ರೈವರ್ ಅನ್ನು ಸಹ ಮಾನಿಟರ್ ಮಾಡುತ್ತೆ. ಡ್ರೈವರ್ ವಿಭಾಗದಲ್ಲಿ ಅಳವಡಿಸಲಾಗಿರುವ ಐ ವಾಚ್ ಇತರೇ ವಾಹನಗಳ ನಡುವೆ ಅಂತರ ಎಷ್ಟಿದೆ ಎಂಬುದನ್ನ ರೆಡ್ ಸಿಗ್ನಲ್ ಮೂಲಕ ಅಳವಡಿಕೆ ಮಾಡಿದ್ರೆ, ಡ್ರೈವರ್ ಮಾನಿಟರಿಂಗ್ ಸಿಸ್ಟಮ್ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅಥವಾ ನಿದ್ರೆಗೆ ಜಾರಿದರೆ ತಕ್ಷಣವೇ ಸಿಗ್ನಲ್ ಮೂಲಕ ಎಚ್ಚರಿಕೆ ನೀಡುತ್ತದೆ.
ಇತ್ತೀಚೆಗೆ ಮಾಲ್, ಮೆಟ್ರೋದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ಕಿರುಕುಳದಿಂದ ಎಚ್ಚೆತ್ತ ಬಿಎಂಟಿಸಿ, ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಿ ಅವರು ಮಹಿಳೆಯರು ಸೇಫ್ ಆಗಿ ಪ್ರಯಾಣಿಸಲು ಪ್ಯಾನಿಕ್ ಬಟನ್ ಹಾಗೂ 5 ಸಾವಿರ ಬಸ್‌ಗಳಲ್ಲಿ ಸಿಸಿಟಿವಿ ಅಳವಡಿಸಿದೆ. ಇದನ್ನೂ ಓದಿ: ಚೀನಾ ನಿಗೂಢ ವೈರಸ್ ಭೀತಿ – ರಾಜ್ಯದಲ್ಲಿ ನ್ಯೂಮೋನಿಯಾ ನಿಯಂತ್ರಣಕ್ಕೆ ಕ್ರಮ
ಬಸ್‌ಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ, ಜಗಳ, ಸೇರಿದಂತೆ ಹಲವು ತೊಂದರೆಗಳಾದ್ರೇ ಜಸ್ಟ್ ಪ್ಯಾನಿಕ್ ಬಟನ್ ಕ್ಲಿಕ್ ಮಾಡಿದ್ರೇ ಸಾಕು-ಬಿಎಂಟಿಸಿ ಸಾರಥಿಗಳು ತಕ್ಷಣ ಹಾಜರಾಗಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ಇದನ್ನೂ ಓದಿ: ಡಿಕೆಗೆ ತಾತ್ಕಾಲಿಕ ರಿಲೀಫ್ – ಸರ್ಕಾರ, ಸಿಬಿಐ ವಾದ ಏನಿತ್ತು? ಹೈಕೋರ್ಟ್ ಹೇಳಿದ್ದು ಏನು? ಡಿಕೆ ಕೇಸ್ ಮುಂದೇನು? – ಕೋರ್ಟ್ ಕಲಾಪದ ಪೂರ್ಣ ವರದಿ ಓದಿ