ಬೆಂಗಳೂರು: ರಸ್ತೆಗಳಲ್ಲಿ ಗತ ವೈಭವ ಮೆರೆದಿದ್ದ ಡಬ್ಬಲ್ ಡೆಕ್ಕರ್ ಬಸ್ಸುಗಳನ್ನ (Double Decker Bus) ಮತ್ತೆ ನಗರದಲ್ಲಿ ಕಾಣುವ ಕನಸು ಕಂಡಿದ್ದ ಬೆಂಗಳೂರಿಗರಿಗೆ ನಿರಾಸೆ ಉಂಟಾಗಿದೆ. ಇನ್ಮುಂದೆ ಮತ್ತೆ ನಗರದ ರಸ್ತೆಗಳಲ್ಲಿ ಕನಸಿನ ಡಬಲ್ ಡೆಕ್ಕರ್ ಬಸ್‌ಗಳು ರಸ್ತೆಗಿಳಿಯಲ್ಲ ಅನ್ನೋ ವಿಚಾರ ಬಯಲಾಗಿದ್ದು, ಈ ಮೂಲಕ ಈ ಸಾಲಿನ ಜನರ ಕನಸು ಕನಸಾಗಿಯೇ ಉಳಿಯಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅದೊಂದು ಕಾಲವಿತ್ತು. 80, 90ರ ದಶಕಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ಸುಗಳು ರಸ್ತೆಗಿಳಿದರೆ ಅದೇನೋ ವೈಭವ. ಬಸ್ಸುಗಳಲ್ಲಿ ಬೆಂಗಳೂರು ಸುತ್ತೋದು ಅದ್ಭುತ ಅನುಭವ. ಅದರಲ್ಲೂ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನ ಆ ಬಸ್ ಮೇಲೆ ಕುಳಿತು ನೋಡುವುದಕ್ಕೆ ಅಂತಾನೇ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಜನ ಬರುತ್ತಿದ್ದರು. ಕಾಲ ಕ್ರಮೇಣ ಆ ಬಸ್ಸುಗಳು ಕಣ್ಮರೆಯಾಗಿ ವೈಭವವು ಮರೆಯಾಗಿಯೇ ಬಿಟ್ಟಿತ್ತು. ಆದರೆ ನಗರದಲ್ಲಿ ಮತ್ತೆ ಆ ಕ್ಷಣಗಳನ್ನ ವಾಪಸ್ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತು ನಿಗಮ ಪ್ರಯತ್ನ ಪಟ್ಟಿತು. ಆದರೆ ಕೊನೆಗೂ ಕನಸು, ಕನಸಾಗೇ ಉಳಿಯುದುಕೊಳ್ಳುವಂತಾಗಿದೆ. ಇದನ್ನೂ ಓದಿ: ನನಗೆ ಈ ಟಿವಿ ಬೇಡ, ತೆಗೆದುಕೊಂಡು ಹೋಗಿ: ದರ್ಶನ್
Advertisement
Advertisement
ಡಬ್ಬಲ್ ಡೆಕ್ಕರ್ ಬಸ್‌ಗಳನ್ನ ರಸ್ತೆಗಳಿಸುವ ಸಂಬಂಧ ಇಲ್ಲಿ ತನಕ ಮೂರು ಬಾರಿ ಟೆಂಡರ್ ಆಹ್ವಾನ ಮಾಡಲಾಗಿದೆ. ಆದರೆ ಈವರೆಗೂ ಯಾವ ಕಂಪನಿಯೂ ಟೆಂಡರ್‌ನಲ್ಲಿ ಭಾಗಿಯಾಗಿಲ್ಲ. ನಿಗಮದ ನಿರೀಕ್ಷೆಯಂತೆ ಟೆಂಡರ್‌ನಲ್ಲಿ ಬಿಡ್ ಮಾಡಲು ಸಂಸ್ಥೆಗಳು ಸಿದ್ಧವಿಲ್ಲ. ಭಾಗವಹಿಸಿದ್ದ ಕೆಲವೇ ಕೆಲವು ಬಿಡ್‌ದಾರರು ಪ್ರತಿ ಕಿ.ಮೀ.ಗೆ 96ರೂ. ದರವನ್ನು ಪ್ರಸ್ತಾಪಿಸಿದ್ದಾರೆ. 96 ರೂ.ಗೆ ನೀಡಿ ಡಬಲ್ ಡೆಕ್ಕರ್ ಬಸ್‌ಗಳನ್ನು ಓಡಿಸಿದರೆ, ಭಾರಿ ನಷ್ಟವಾಗುವ ಸಾಧ್ಯೆಯಿರುವುದರಿಂದ ಯೋಜನೆ ಕೈಬಿಡಲು ನಿಗಮ ತೀರ್ಮಾನಿಸಿದೆ. ಇದನ್ನೂ ಓದಿ: ಜೋಗಕ್ಕೆ ಹೋಗುವ ಪ್ರವಾಸಿಗರೇ ಎಚ್ಚರವಾಗಿರಿ – ರಸ್ತೆಯಲ್ಲೇ ಹಸುವನ್ನು ಬೇಟೆಯಾಡಿದ ಕರಿ ಚಿರತೆ
Advertisement
ಯೋಜನೆ ಕೈ ಬಿಡಲು ಕಾರಣಗಳೇನು?
– ಕಂಪನಿಗಳು ಬಿಡ್‌ನಲ್ಲಿ ಭಾಗಿಯಾಗದೇ ಇರೋದು
– ಭಾಗಿಯಾದ ಕಂಪನಿಗಳ ಬೇಡಿಕೆಗೆ ತಕ್ಕಂತೆ ಹಣ ನೀಡಲು ನಿಗಮಕ್ಕೆ ಸಾಧ್ಯ ಆಗದೇ ಇರೋದು
– ಒಂದೊಮ್ಮೆ ಕೇಳಿದಷ್ಟು ಹಣ ನೀಡಿ ಬಸ್ ತಂದರೆ ಹೊರೆ ಹೆಚ್ಚಾಗುವ ಭೀತಿ
– ಸಾಮಾನ್ಯ ಬಸ್‌ಗಳಗಿಂತಲೂ ಹೆಚ್ಚಿನ ಟಿಕೆಟ್ ದರ ನಿಗದಿ ಮಾಡಬೇಕಾದ ಸವಾಲು
– ಆಯ್ದ ಸ್ಥಳಗಳಲ್ಲಿ ಮಾತ್ರ ಓಡಿಸಬೇಕಾದ ಕಾರಣ ಲಾಭಾಂಶದ ನಿರೀಕ್ಷೆ ಇಲ್ಲದಿರೋದು
– ಎಲ್ಲಾ ಸವಾಲುಗಳನ್ನ ದಾಟಿ ತಂದರು ಲಾಭ ಬಾರದಿದ್ದರೆ ನಿಗಮಕ್ಕೆ ನಷ್ಟವಾಗುವ ಸಾಧ್ಯತೆ ಹಿನ್ನೆಲೆ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ. ಇದನ್ನೂ ಓದಿ: ಪಿತೃಪಕ್ಷದಂದು ಧರ್ಮ ಸಂಕಟ – ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ಮನವಿ
Advertisement
ಬಿಎಂಟಿಸಿಗೆ (BMTC) ವಜ್ರ ಬಸ್ ಈಗಾಗಲೇ ಭಾರಿ ಹೊರೆಯಾಗಿ ಪರಿಣಮಿಸಿದ್ದು, ಇದರೊಂದಿಗೆ ಡಬಲ್ ಡೆಕ್ಕರ್ ಬಸ್‌ಗಳೂ ನಿಗಮಕ್ಕೆ ಮತ್ತಷ್ಟು ಆರ್ಥಿಕ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಯೂ ಹೆಚ್ಚಾಗಿತ್ತು. ಹವಾನಿಯಂತ್ರಣ ರಹಿತ ಬಸ್‌ಗಳಾಗಿರುವುದರಿಂದ ಈ ಬಸ್‌ಗಳಿಂದ ಹೆಚ್ಚಿನ ಆದಾಯದ ನಿರೀಕ್ಷೆಯಿಲ್ಲ. ಆದ್ದರಿಂದ ಸಾಮಾನ್ಯ ದರವನ್ನೇ ನಿಗದಿ ಪಡಿಸಬೇಕಾಗಿತ್ತು. ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಿದರೆ ಸಂಸ್ಥೆಗೆ ಲಾಭದ ಬದಲು ಮತ್ತಷ್ಟು ಹೊರೆಯಾಗುವ ಆತಂಕದಿಂದಾಗಿ ಬಸ್ ಖರೀದಿಸಲು ನಿಗಮ ಮುಂದಾಗಿಲ್ಲ.
ಹೊಸ ತಲೆಮಾರು ನಗರದ ರಸ್ತೆಗಳಲ್ಲಿ ನಾವು ಕೂಡ ಬಸ್‌ನ ವೈಭವ ನೋಡಬಹುದೇನೋ ಅನ್ನೋ ನಿರೀಕ್ಷೆಯಲ್ಲಿದ್ದರು, ಆದರೆ ಸದ್ಯ ನಿರೀಕ್ಷೆ ಹುಸಿಯಾಗಿದ್ದು, ಈ ಯೋಜನೆ ಅಸಾಧ್ಯ ಅನ್ನೋ ನಿಟ್ಟಿನಲ್ಲಿ ನಿಗಮ ಯೋಜನೆ ಪ್ಲ್ಯಾನ್ ಕೈ ಬಿಟ್ಟು ಸುಮ್ಮನಾಗಿದೆ. ಇದನ್ನೂ ಓದಿ: US Presidential Debate| ಮೊದಲ ಬಾರಿಗೆ ಟ್ರಂಪ್, ಕಮಲಾ ಮುಖಾಮುಖಿ: ಆರ್ಥಿಕತೆ, ವಲಸೆ ಬಗ್ಗೆ ಚರ್ಚೆ