ಬೆಂಗಳೂರು: ಜುಲೈ ತಿಂಗಳಿನಲ್ಲಿ 17,799 ಟ್ರಿಪ್ ಗಳಲ್ಲಿ ತಪಾಸಣೆ ನಡೆಸಿರುವ ಬಿಎಂಟಿಸಿ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ತನಿಖಾ ತಂಡ 1,704 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿರುವುದನ್ನು ಪತ್ತೆ ಹಚ್ಚಿ, ಪ್ರಯಾಣಿಕರಿಂದ 2,67,950 ರೂ. ದಂಡ ವಸೂಲಿ ಮಾಡಿದೆ.
Advertisement
ಟಿಕೆಟ್ ನೀಡದ ಕಂಡಕ್ಟರ್ ಗಳ ಮೇಲೆ 1,188 ಕೇಸ್ ಗಳು ದಾಖಲಿಸಲಾಗಿದೆ. ಮಹಿಳೆಯರಿಗೆ ಮೀಸಲಿಟ್ಟ ಸೀಟ್ ನಲ್ಲಿ ಪ್ರಯಾಣ ಮಾಡಿದ ನಾಲ್ಕು ಪುರುಷ ಪ್ರಯಾಣಿಕರಿಂದ 400 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಇಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ತಾಯ್ನಾಡಿಗೆ ಕರೆತಂದ ಮೋದಿಗೆ ಹಾಡಿನ ಧನ್ಯವಾದ ತಿಳಿಸಿದ ಸಿಖ್ಖರು
Advertisement
Advertisement
ಒಟ್ಟಾರೆಯಾಗಿ 2021 ಜುಲೈ ತಿಂಗಳಲ್ಲಿ 1,708 ಪ್ರಯಾಣಿಕರಿಂದ ಒಟ್ಟು 2,68,350 ರೂ. ದಂಡವನ್ನು ವಸೂಲಿ ಮಾಡಲಾಗಿದ್ದು, ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್, ದಿನದ ಪಾಸು, ಮಾಸಿಕ ಪಾಸುಗಳನ್ನು ಪಡೆದು ಪ್ರಯಾಣಿಸಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ. ಟಿಕೆಟ್ ಪಡೆದು ಪ್ರಯಾಣಿಸುವ ಪ್ರವೃತ್ತಿಯಿಂದ ಸಂಸ್ಥೆಯ ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಸಾರಿಗೆ ಸಂಸ್ಥೆ ಕೋರಿದೆ. ಇದನ್ನೂ ಓದಿ: ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್
Advertisement