ಬೆಂಗಳೂರು: ಯಾವುದೇ ಟೆಂಡರ್ ಕರೆಯದೆ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾಟರಿ ಖರೀದಿಗೆ ಮುಂದಾಗಿದ್ದು, ಈ ಮೂಲಕ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಗಲು ದರೋಡೆಗಿಳಿದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ನಮ್ಮ ಮೆಟ್ರೋದಲ್ಲಿ ಬ್ಯಾಟರಿ ಖರೀದಿ ವಿಚಾರದಲ್ಲಿ ನಾಲ್ಕು ಕೋಟಿ ರೂಪಾಯಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಯಾವುದೇ ಟೆಂಡರ್ ಕರೆಯದೇ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಕಾನೂನು ಉಲ್ಲಂಘಿಸಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಬಿಎಂಆರ್‌ಸಿಎಲ್ ನ ಸೀನಿಯರ್ ಪಿಆರ್ ಒ ಯಶವಂತ್ ಚವ್ಹಾಣ್, ನೋ ಕಾಮೆಂಟ್ಸ್, ಲೋಗೋ ಹಿಂದಕ್ಕೆ ತೆಗೆಯಿರಿ ಅಂತ ಪೊಗರಿನಿಂದ ಕೈ ಬೆರಳ ಮೂಲಕ ಸನ್ನೆ ಮಾಡಿದ್ದಾರೆ.
Advertisement
Advertisement
ಪವರ್ ಫೆಲ್ಯೂರ್ ಆಗಿ ಮೆಟ್ರೋ ಟ್ರೈನ್ ಎಲ್ಲಿಂದರಲ್ಲಿ ನಿಲ್ಲುತ್ತಿತ್ತು. ಇದೇ ನೆಪ ಮಾಡಿಕೊಂಡ ಬಿಎಂಆರ್‌ಸಿಎಲ್ ಅಧಿಕಾರಿಗಳು ಬ್ಯಾಟರಿ ಖರೀದಿ ಹೆಸರಲ್ಲಿ ಕೋಟಿ ಕೋಟಿ ಜೇಬಿಗಿಳಿಸಿದ್ದಾರೆ. ಈಗಾಗಲೇ ಖರೀದಿಸಿದ್ದ 20 ವರ್ಷ ಆಯಸ್ಸಿನ ಬ್ಯಾಟರಿಗಳು ಹತ್ತೇ ವರ್ಷಕ್ಕೆ ತನ್ನ ಗುಣಮಟ್ಟವನ್ನ ಕಳೆದುಕೊಂಡಿದೆ. ಇದರ ರಿಪ್ಲೇಸ್‍ಮೆಂಟ್ ಹೆಸರಲ್ಲಿ ದೋಖಾ ನಡೆದಿದೆ.
Advertisement
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ನಮ್ಮ ಮೆಟ್ರೋ ಅಧಿಕಾರಿಗಳ ಹಗಲು ದರೋಡೆಗೆ ಬೆಂಗಳೂರು ಅಭಿವೃದ್ಧಿ ಸಚಿವರು ಕಡಿವಾಣ ಹಾಕುತ್ತಾರ ಎಂದು ಕಾದು ನೋಡಬೇಕಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv