ಬೆಂಗಳೂರು: ನಗರದ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆಯಿದೆ. ಮೆಟ್ರೋ (Namma Metro) ಟಿಕೆಟ್ ದರ (Ticket Price) ಏರಿಕೆ ಕುರಿತು ಬೆಂಗಳೂರು ಮೆಟೋ ರೈಲ್ ಕಾರ್ಪೊರೇಶನ್ ಲಿಮಿಟೆಡ್‌ನ (BMRCL) ಚಿಂತನೆ ನಡೆಸಿದೆ.
ರೈಲ್ವೇ ನಿಲ್ದಾಣಗಳಲ್ಲಿ ಆತ್ಮಹತ್ಯೆ (Suicide) ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಎಲ್ಲಾ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಸ್ಕ್ರೀನ್ ಡೋರ್ (PSDs) ಅಳವಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಇದನ್ನೂ ಓದಿ: ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್
Advertisement
Advertisement
PSDs ಅಳವಡಿಕೆಗೆ ಒಂದು ನಿಲ್ದಾಣಕ್ಕೆ 6-7 ಕೋಟಿ ರೂ. ವೆಚ್ಚವಾಗಲಿದೆ. ಈ ಕಾರಣಕ್ಕೆ ಟಿಕೆಟ್ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ. ಇದನ್ನೂ ಓದಿ: ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್ ನ್ಯೂಸ್ ಕೊಟ್ಟ ಹಿಂಡನ್‌ಬರ್ಗ್
Advertisement
ಸದ್ಯಕ್ಕೆ ಯಾವುದೇ ದರ ಏರಿಕೆ ಇಲ್ಲ. ದರ ಏರಿಕೆಯ ಸಂಬಂಧ ಚರ್ಚೆ ನಡೆಸಲಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ದರ ಏರಿಸಬೇಕೇ? ಬೇಡವೇ ಎಂಬ ನಿರ್ಧಾರಕ್ಕೆ ಬಿಎಂಆರ್‌ಸಿಎಲ್ ಬರಲಿದೆ.
Advertisement