ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್)ದ ಪೈಲಟ್ ಪ್ರಾಜೆಕ್ಟ್ನ ಅಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ 5ಜಿ ನೆಟ್ವರ್ಕ್ ಅನ್ನು ಪರೀಕ್ಷಿಸಿದೆ. ಈ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ ದೇಶದಲ್ಲೇ 5ಜಿ ನೆಟ್ವರ್ಕ್ ಪರೀಕ್ಷಿಸಿದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು, ಬೆಂಗಳೂರಿನ ನಮ್ಮ ಮೆಟ್ರೋ 5ಜಿ ನೆಟ್ವರ್ಕ್ ಅನ್ನು ಪರೀಕ್ಷಿಸಿದೆ. ನಮ್ಮ ಮೆಟ್ರೋ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಇದು 4ಜಿ ನೆಟ್ವರ್ಕ್ಗಿಂತಲೂ 50 ಪಟ್ಟು ವೇಗದ ಇಂಟರ್ನೆಟ್ ಒದಗಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್ ಭೀತಿ – ಆತಂಕ ಹೆಚ್ಚಿಸಿದ ಆಫ್ರಿಕನ್ ಹಂದಿಜ್ವರ
Advertisement
BMRCL has become the first Metro in India to test 5G network under a Pilot Project of TRAI. The 5G network radiated in 200 m radius, deployed by Reliance Jio at M G Rd station. The test has achieved 1.45 Gbps Download and 65 Mbps Upload speeds, making it 50 times faster than 4G. pic.twitter.com/jCtFmhOjmH
— ನಮ್ಮ ಮೆಟ್ರೋ (@cpronammametro) July 22, 2022
Advertisement
ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ಬೆಂಗಳೂರಿನ ಎಂಜಿ ರೋಡ್ ನಿಲ್ದಾಣದಲ್ಲಿ 200 ಮೀ. ವ್ಯಾಪ್ತಿಯಲ್ಲಿ 5ಜಿ ನೆಟ್ವರ್ಕ್ ಅನ್ನು ಸ್ಥಾಪಿಸಿದೆ. ಪರೀಕ್ಷೆಯಲ್ಲಿ 1.45 ಜಿಬಿಪಿಎಸ್(ಗಿಗಾಬಿಟ್ ಪರ್ ಸೆಕೆಂಡ್) ಡೌನ್ಲೋಡ್ ಹಾಗೂ 65 ಎಂಬಿಪಿಎಸ್(ಮೆಗಾಬಿಟ್ಸ್ ಪರ್ ಸೆಕೆಂಡ್) ಅಪ್ಲೋಡ್ ವೇಗವನ್ನು ಸಾಧಿಸಿದ್ದು, ಇದು 4ಜಿ ನೆಟ್ವರ್ಕ್ಗಿಂತಲೂ 50 ಪಟ್ಟು ವೇಗದ ಇಂಟರ್ನೆಟ್ ಒದಗಿಸಿದೆ ಎಂದು ನಮ್ಮ ಮೆಟ್ರೋ ಟ್ವೀಟ್ನಲ್ಲಿ ತಿಳಿಸಿದೆ. ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆ ನಡೆಸದೇ ಅಂಗವಿಕಲರ ವಿಮಾನ ಪ್ರಯಾಣವನ್ನು ರದ್ದುಗೊಳಿಸುವಂತಿಲ್ಲ: ಡಿಜಿಸಿಎ