ಮುಂಬೈ: ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಸಾವಿರಾರು ಜನರ ಹೆಸರುಗಳು ಕಾಣೆಯಾಗಿದ್ದು ಇವಿಎಂ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಉದ್ದವ್ ಶಿವಸೇನೆ ಬಣದ (UBT) ನಾಯಕ ಸಂಜಯ್ ರಾವತ್ (Sanjay Raut) ಆರೋಪ ಮಾಡಿದ್ದಾರೆ.
ಬೃಹನ್‌ಮುಂಬೈ ಮಹಾನಗರಪಾಲಿಕೆ ಚುನಾವಣೆಯ (Mumbai BMC Election) ಮತ ಎಣಿಕೆ ನಡೆಯುತ್ತಿರುವ ಸಮಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂಬೈನಂತಹ ನಗರದಲ್ಲಿ ನಡೆಯುತ್ತಿರುವ ಮತದಾನದ ಮಾದರಿ ಗಂಭೀರ ವಿಷಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ, ಎಂಎನ್‌ಎಸ್, ಕಾಂಗ್ರೆಸ್‌ಗೆ ಮತ ಚಲಾಯಿಸಿದ ಸಾವಿರಾರು ಜನರ ಹೆಸರುಗಳು ಕಾಣೆಯಾಗಿದೆ ಎಂದು ದೂರಿದರು. ಇದನ್ನೂ ಓದಿ: ಮುಂಬೈ ಪಾಲಿಕೆ ಚುನಾವಣೆ – ಮಹಾಯುತಿಗೆ ಭಾರೀ ಮುನ್ನಡೆ, ಉದ್ದವ್ ಕೋಟೆ ಛಿದ್ರ?
#WATCH | Mumbai | On #BMCElections Shiv Sena (UBT) leader Sanjay Raut says, “The voting pattern that has been going on in a city like Mumbai is a serious matter. Names of thousands of people, who have even voted in the Assembly elections, are missing in areas where Shiv Sena… pic.twitter.com/BOnlxfFjqL
— ANI (@ANI) January 16, 2026

