ಮುಂಬೈ: ರಷ್ಯಾ ಮೂಲದ `ಬ್ಲೂ ವೇಲ್ ಚಾಲೆಂಜ್’ ಗಾಗಿ 14 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಮನಕಲಕುವ ಘಟನೆಯೊಂದು ಮುಂಬೈನ ಅಂಧೇರಿಯಲ್ಲಿ ಬೆಳಕಿಗೆ ಬಂದಿದೆ. ಇದು ಭಾರತದಲ್ಲಿ ಮೊದಲ ಬಲಿಯಾಗಿದೆ.
ಮನ್ ಪ್ರಿತ್ ಸಹಾನ್ಸ್ ಬ್ಲೂ ವೇಲ್ ಚಾಲೆಂಜ್ ಗೆಲ್ಲುವ ಸಲುವಾಗಿ ಕಟ್ಟಡವೊಂದರಿಂದ ಹಾರಿ ತನ್ನ ಪ್ರಾಣವನ್ನೇ ಕಳೆದುಕೊಂಡ ಬಾಲಕ.
Advertisement
ಮನ್ ಪ್ರಿತ್ ಶುಕ್ರವಾರ ಸಂಜೆ ಶಾಲೆಯಿಂದ ಮನೆಗೆ ಹೊರಡುವ ವೇಳೆ ಸಹಪಾಠಿಗಳೊಂದಿಗೆ ತಾನು ಸೋಮವಾರ ಶಾಲೆಗೆ ಗೈರಾಗಲಿದ್ದೇನೆ ಅಂತ ಹೇಳಿದ್ದಾನೆ. ಅಲ್ಲದೇ ಆತ್ಮಹತ್ಯೆಗೆ ಎರಡು ದಿನಗಳ ಮೊದಲು ಟೆರೇಸ್ ನಿಂದ ಹೇಗೆ ಹಾರುವುದು ಎಂಬುವುದನ್ನು ಅಂತರ್ಜಾಲದಲ್ಲಿ ಹುಡುಕಾಡುತ್ತಿದ್ದನು ಅಂತ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Advertisement
ಅಲ್ಲದೇ ಘಟನೆ ನಡೆಯುವ ಒಂದು ವಾರದ ಮುಂಚೆಯೇ ಈತನ ಚಲನವಲನಗಳಲ್ಲಿ ವ್ಯತ್ಯಾಸಗಳು ಕಂಡುಬಂದಿತ್ತು. ಈ ಬಗ್ಗೆ ಪೋಷಕರಿಗೂ ಸಂಶಯವಿತ್ತು. ಆದ್ರೆ ತಮ್ಮ ಮಗ ಇಂತಹ ಒಂದು ಘೋರ ಹೆಜ್ಜೆ ಇಡಬಹುದು ಅಂತ ಅಂದಕೊಂಡಿರಲಿಲ್ಲ. ಇದೀಗ ಮಗನ ಸಾವಿನಿಂದ ಪೋಷಕರು ಆಘಾತಗೊಂಡಿದ್ದಾರೆ.
Advertisement
ಆತ್ಮಹತ್ಯೆಗೂ ಕೆಲ ನಿಮಿಷಗಳ ಮುಂಚೆ ಬಾಲಕ ಟೆರೇಸ್‍ನಲ್ಲಿ ಕಾಲು ಕೆಳಗೆ ಹಾಕಿ ಕುಳಿತ ಫೋಟೋ ತೆಗೆದಿದ್ದಾನೆ. ಬಳಿಕ ಆ ಫೋಟೋದ ಮೇಲೆ `ಇನ್ನು ಕೆಲವೇ ಸಮಯದಲ್ಲಿ ನಿಮ್ಮ ಜೊತೆ ಈ ಫೋಟೋ ಮಾತ್ರ ಇರಲಿದೆ ಅಂತ ಬರೆದಿದು ಪೋಸ್ಟ್ ಮಾಡಿದ್ದಾನೆ.
Advertisement
ಪ್ರಕರಣದ ಕುರಿತಂತೆ ತನಿಖೆ ನಡೆಸಿದ ವೇಳೆ, ಪನ್ ಪ್ರಿತ್ ಕಟ್ಟಡವೊಂದರ ಮೇಲೆ ಕುಳಿತಿರುವುದನ್ನು ಗಮನಿಸಿ ಕೆಳಗಿಳಿಯುವಂತೆ ಕೇಳಿಕೊಂಡಿದ್ದರು. ಈ ವೇಳೆ ಮನ್ ಪ್ರಿತ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. `ನಾನು ಕಟ್ಟಡದಿಂದ ಜಿಗಿಯುವುದನ್ನು ತಡೆಯಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದ್ದಾರೆ ಅಂತ ಫೊಟೋದೊಂದಿಗೆ ಪೋಸ್ಟ್ ಮಾಡಿ ಬಳಿಕ ಕಟ್ಟಡದಿಂದ ಜಿಗಿದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಅಂತ ವೈದ್ಯರು ಹೇಳಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬಳಿಕ ಮುಂಬೈ ಪೊಲೀಸರು ಬಾಲಕ ಕಟ್ಟಡದಿಂದ ಹಾರುವುದನ್ನು ಇಬ್ಬರು ನೋಡಿದ್ದಾರೆ. ಇನ್ನು ಹೆತ್ತವರು ತಮ್ಮ ಮಕ್ಕಳಿಗೆ ಇಂತಹ ಆಟದತ್ತ ಗಮನಹಿರಿಸದಂತೆ ಜಾಗೃತರಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಏನಿದು ಬ್ಲೂ ವೇಲ್ ಗೇಮ್?: ಇದು ರಷ್ಯಾ ಮೂಲದ ಭಯಾನಕ ಆನ್ ಲೈನ್ ಆಟವಾಗಿದ್ದು, ಇದನ್ನು ಮಾರಣಾಂತಿಕ ಬ್ಲೂ ವೇಲ್ ಗೇಮ್ ಅಥವಾ ಬ್ಲೂ ವೇಲ್ ಚಾಲೆಂಜ್ ಅಂತನೂ ಕರೆಯುತ್ತಾರೆ. ಈ ಆಟದಲ್ಲಿ ಸಂಗಿತಾ ಕೇಳುವುದು, ಬೆಳಗ್ಗೆ ಬೇಗ ಏಳುವುದು ಸೇರಿದಂತೆ 50 ಟಾಸ್ಕ್ ಗಳಿರುತ್ತವೆ. ಇದರಲ್ಲಿ ಕೊನೆಯ ಆಟ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯುವುದು ಆಗಿರುತ್ತದೆ. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವ ಮುನ್ನ ವ್ಯಕ್ತಿ ಸಾಕ್ಷಿಗೆ ಫೋಟೋಗಳನ್ನು ಕಳುಹಿಸಬೇಕು. ನಂತರ ಕಟ್ಟಡದಿಂದ ಹಾರಬೇಕು ಎಂದಾಗಿರುತ್ತದೆ.
ಇಂತಹ ಟಾಸ್ಕ್ ಗಳು ಹೆಚ್ಚಾಗಿ ಹಾರರ್ ಸಿನಿಮಾಗಳಲ್ಲಿ ಇರುತ್ತವೆ. ಸದ್ಯ ಈ ಆಟಕ್ಕೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಆದ್ರೆ ಮುಂಬೈನಲ್ಲಿ ನಡೆದ ಈ ಘಟನೆ ಭಾರತದಲ್ಲಿ ಮೊದಲ ಬಲಿಯಾಗಿದೆ.