ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಖರೀದಿಸಿದ ಬಳಿಕ ಆಪ್‌ನಲ್ಲಿ ಹೊಸ ಹೊಸ ಬದಲಾವಣೆಗಳನ್ನು ತರಲು ಸಜ್ಜಾಗುತ್ತಿದ್ದಾರೆ. ಇದೀಗ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ (Blue Tick) ಮಾರ್ಕ್ ಬೇಕೆಂದರೆ ಪಾವತಿಸುವ ಹೊಸ ಯೋಜನೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಟ್ವಿಟ್ಟರ್ ಮಸ್ಕ್ ತೆಕ್ಕೆಗೆ ಸೇರುತ್ತಿದ್ದಂತೆ ಅವರು ಬಳಕೆದಾರರಿಗೆ ಆಪ್‌ನ ಹೊಸ ಬದಲಾವಣೆಗಳ ಬಗ್ಗೆ ಕೆಲ ಸುಳಿವುಗಳನ್ನು ನೀಡಿದ್ದಾರೆ. ಅವರು ಟ್ವಿಟ್ಟರ್ ಪರಿಶೀಲನೆ ಪ್ರತಿಕ್ರಿಯೆಯನ್ನು ಶೀಘ್ರದಲ್ಲೇ ನವೀಕರಿಸಲಾಗುವುದು ಎಂದಿದ್ದಾರೆ. ಇದರ ಪ್ರಕಾರ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಮಾರ್ಕ್ ಅಥವಾ ಪರಿಶೀಲಿಸಿದ ಪ್ರೊಫೈಲ್‌ಗಳಿಗೆ ಪಾವತಿಸುವ ನಿಯಮವನ್ನು ತರುವ ಸಾಧ್ಯತೆಯಿದೆ.
Advertisement
Advertisement
ವರದಿಗಳ ಪ್ರಕಾರ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಟ್ವಿಟ್ಟರ್ ಬಳಕೆದಾರರು ಇನ್ನು ತಿಂಗಳಿಗೆ 4.99 ಡಾಲರ್ (411 ರೂ.) ಪಾವತಿಸಬೇಕಾಗಬಹುದು. ಒಂದು ವೇಳೆ ಪಾವತಿಸದೇ ಹೋದಲ್ಲಿ ಆ ಬಳಕೆದಾರರು ಬ್ಲೂ ಟಿಕ್ ಮಾರ್ಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಮಸ್ಕ್ ಪಾಲಾಗುತ್ತಿದ್ದಂತೆ ಪರ್ಯಾಯ ಆಪ್ ರಚನೆಯಲ್ಲಿ ತೊಡಗಿದ ಟ್ವಿಟ್ಟರ್ ಸಂಸ್ಥಾಪಕ
Advertisement
Advertisement
ಸದ್ಯ ಕಂಪನಿ ಇನ್ನೂ ಈ ಯೋಜನೆಯ ಬಗ್ಗೆ ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸಿಲ್ಲ. ಒಂದು ವೇಳೆ ಈ ಪಾವತಿಯ ವಿಧಾನವನ್ನು ಜಾರಿಗೊಳಿಸಿದ್ದಲ್ಲಿ ಸಾಮಾನ್ಯ ಬಳಕೆದಾರರು ಕೂಡಾ ಸುಲಭವಾಗಿ ಬ್ಲೂ ಟಿಕ್ ಮಾರ್ಕ್ ಅನ್ನು ಪಡೆಯಲು ಸಾಧ್ಯವಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮಸ್ಕ್ ತೆಕ್ಕೆಗೆ ಟ್ವಿಟ್ಟರ್ – ಅಗರ್‌ವಾಲ್‌ಗೆ ಸಿಗಲಿದೆ 345 ಕೋಟಿ ರೂ. ಪ್ಯಾಕೇಜ್