ಹವಾಮಾನ ವೈಪರೀತ್ಯ- ಕಡಲತೀರದಲ್ಲಿ ರಾಶಿ ರಾಶಿ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಫಿಶ್

Public TV
2 Min Read
KARWAR FISH 1

ಕಾರವಾರ: ರಾಜ್ಯಾದ್ಯಂತ ಹವಾಮಾನ ವೈಪರೀತ್ಯದಿಂದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆದರೆ ಕರಾವಳಿಯಲ್ಲಿ ಹವಾಮಾನ ಬದಲಾವಣೆ ಇದೀಗ ಮೀನುಗಾರರಿಗೆ ಕಂಠಕವಾಗಿ ಪರಿಣಮಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಡಲ ತೀರದಲ್ಲಿ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಫಿಶ್‍ಗಳು ಹೇರಳವಾಗಿ ದಡದಲ್ಲಿ ಸಂಗ್ರಹವಾಗುತ್ತಿದ್ದು, ಮತ್ಸ್ಯ ಕ್ಷಾಮ ಎದುರಾಗಿದೆ.

KARWAR FISH 2

ಏನಿದು ಬ್ಲೂ ಬಟನ್ ಜೆಲ್ಲಿ ಫಿಷ್?, ಮೀನುಗಾರರಿಗೆ ಏನು ತೊಂದರೆ?: ಬ್ಲೂ ಬಟನ್ ಜೆಲ್ಲಿ ಫಿಶ್ (Button Jellyfish) ಕಳೆಬರ ಹೊನ್ನಾವರದ ಕಾಸರಕೋಡ ಸುತ್ತ-ಮುತ್ತ ಹಾಗೂ ಮುಗಳಿ ಕಡಲ ಕಿನಾರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಕಂಡು ಬಂದಿದೆ. ಸಮುದ್ರ ನೀರಿನ ತಾಪಮಾನದ ಬದಲಾವಣೆಯ ವಿಧ್ಯಮಾನದಿಂದ ಬ್ಲೂ ಬಟನ್ ಜೆಲ್ಲಿ ಫಿಶ್‍ಗಳ ಭಾರೀ ಪ್ರಮಾಣದ (ಲಕ್ಷ, ಕೋಟಿ ಸಂಖ್ಯೆ)ಯ ಉತ್ಪತ್ತಿಗೆ ಕಾರಣವಾಗುತ್ತದೆ.

KARWAR FISH 3

ಸಮುದ್ರ ನೀರಿನ ತಾಪಮಾನ ಹೆಚ್ಚಾಗಿ ಉಷ್ಣ ನೀರು ಇದರ ಸಂಖ್ಯೆ ಹೆಚ್ಚು ಮಾಡುತ್ತದೆ. ಕಳೆಬರ ದ ಸುತ್ತಮುತ್ತ ಮತ್ತು ಮುಗಳಿ ಕಡಲಧಾಮದ ಪರಿವ್ಯಾಪ್ತಿಯ ಟೊಂಕಾ ಮರಳು ಕಡಲತೀರ ದಲ್ಲಿ ಬ್ಲೂ ಬಟನ್ ಜೆಲ್ಲಿ ಫಿಶ್‍ಗಳ ದೊಡ್ಡ ಗುಂಪು ಬಂದು ಬಿದ್ದಿದೆ. ಇವು ವಿಷಕಾರಿ ಬಾಹುಗಳನ್ನು ಹೊಂದಿದ್ದು ಇವುಗಳ ಸೇವನೆ ಅಥವಾ ಇವುಗಳ ಮಧ್ಯ ಸಿಕ್ಕಿ ಉಸಿರಾಟದ ತೊಂದರೆಯಿಂದ ಜಲಚರ ಸಸ್ತನಿಗಳು ಸಾವು ಕಾಣುತ್ತವೆ ಎಂದು ಕಡಲ ವಿಜ್ಞಾನಿಗಳು ಹೇಳುತ್ತಾರೆ. ಇದನ್ನೂ ಓದಿ: ಅನ್ನ ಕೊಟ್ಟ ದೇವ್ರು ನೀನು ಚೆನ್ನಾಗಿರಪ್ಪ- ಸಿಎಂ ಕಂಡು ಕೈ ಮುಗಿದ ಮಹಿಳೆ

ಬ್ಲೂ ಬಟನ್ ಜೆಲ್ಲಿ ಫಿಶ್ ಇದು ಒಂದು ಹೈಡ್ರಾಡ್ ಪ್ರಬೇಧಕ್ಕೆ ಸೇರಿದ್ದು, ಸಮುದ್ರದ ಮೇಲ್ಭಾಗದಲ್ಲಿ ದೊಡ್ಡ ಗುಂಪಾಗಿ ಉತ್ಪತ್ತಿಯಾದರೆ (ಬ್ಲೂಮ)ಇತರ ಸಮುದ್ರ ಜಲಚರಗಳಿಗೆ ಮಾರಕವಾಗಿರುತ್ತದೆ. ಇವು ಏಡಿ, ಮೀನು, ಸಿಗಡಿ ಮೀನಿನ ಮೇಲೆ ಆಕ್ರಮಣ ಮಾಡಿ ತಿನ್ನುತ್ತವೆ. ಇವು ಸಮುದ್ರದ ತೆರೆ ಮತ್ತು ಗಾಳಿಯ ದಿಕ್ಕಿನಲ್ಲಿ ಚಲಿಸುತ್ತದೆ. ಆಹಾರಕ್ಕಾಗಿ ಸಮುದ್ರ ಜೀವಿಗಳಲ್ಲು ಸ್ಪರ್ಧೆ ಇದ್ದು, ಹೋರಾಟವು ನಡೆಯುತ್ತದೆ. ಡಾಲ್ಲಿನ್, ಬಂಗಡೆ, ತಾಲ್ಲೆ ಮೀನು ಜೆಲ್ಲಿ ಫಿಶ್ ಗಳ ಆಹಾರ ಒಂದೇ ಬಗೆಯಾಗಿರುತ್ತದೆ. ಈ ಹಿಂದೆ ಟೊಂಕಾದಲ್ಲಿ ಸತ್ತ ಡಾಲ್ವಿನ್ ಲಕ್ಷಾಂತರ ಸಂಖ್ಯೆಯ ವಿಷಕಾರಿ ಬ್ಲೂ ಬಟನ್ ಜಿಲ್ಲೆ ಫಿಶ್ ಗುಂಪಿನ ಮಧ್ಯೆ ಸಿಕ್ಕಿ ಸಾವಾಗಿರುವ ಸಾಧ್ಯತೆಗಳಿವೆ ಎಂದು ಕಡಲ ವಿಜ್ಞಾನಿ ಪ್ರಕಾಶ್ ಮೇಸ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

KARWAR FISH

ಈ ಜಲ್ಲಿ ಫಿಶ್‍ಗಳು ಮನುಷ್ಯ ಮುಟ್ಟಿದರೆ ತುರಿಕೆಯಾಗುತ್ತದೆ. ಮನುಷ್ಯ ಇದನ್ನು ತಿನ್ನುವುದಿಲ್ಲ. ಕಡಲಾಮೆ ಬಿಟ್ಟರೆ ಇತರ ಸಮುದ್ರ ಜೀವಿಗಳು ಇದನ್ನು ತಿನ್ನುವುದು ಕಡಿಮೆ. ಅದರ ಗುಂಪಿನಲ್ಲಿ ಸಿಕ್ಕಿಕೊಂಡರು ಜಲಚರಗಳ ಸಾವು ಖಚಿತ. ಇವು ಲಕ್ಷ ಕೋಟಿಗಟ್ಟಲೆ ಸಂಖ್ಯೆಯಲ್ಲಿ ವಿಶಾಲ ಪ್ರದೇಶ ಅವರಿಸುತ್ತದೆ.

ಇದೀಗ ಹವಾಮಾನ ವೈಪರೀತ್ಯದಿಂದ ಹೊನ್ನಾವರದ ಕಡಲ ತೀರದಲ್ಲಿ ಅತೀ ಹೆಚ್ಚು ಜಲ್ಲಿ ಫಿಶ್‍ಗಳು ಉತ್ಪತ್ತಿಯಾಗಿದ್ದು ಈ ಭಾಗದಲ್ಲಿ ಇರುವ ಮೀನುಗಳಿಗೆ ಕಂಠಕವಾಗಿದೆ. ಹೀಗಾಗಿ ಈ ಭಾಗದಲ್ಲಿ ಉತ್ಪತ್ತಿಯಾದ ಜಲ್ಲಿ ಫಿಶ್‍ನಿಂದಾಗಿ ಮೀನುಗಳು ತಮ್ಮ ದಿಸೆಯನ್ನು ಬದಲಿಸಿ ಬೇರೆಡೆ ತೆರಳುತ್ತಿವೆ. ಹವಾಮಾನ ಬದಲಾವಣೆ ಮೀನುಗಾರಿಕೆಗೆ ಪೂರಕವಾಗಿದ್ದರೂ ಬ್ಲೂ ಬಟನ್ ಜೆಲ್ಲಿ ಫಿಶ್‍ನ ಹೇರಳ ಉತ್ಪತ್ತಿಯಿಂದ ಮೀನುಗಾರರಿಗೆ ಮತ್ಸ್ಯ ಕ್ಷಾಮ ಎದುರಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article