ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಗ್ಯಾಂಗ್ ವಿರುದ್ಧ ಪೊಲೀಸರು ಪ್ರಬಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಸ್ಕಾರ್ಪಿಯೋ ಕಾರಿನ ಕಾರ್ಪೆಟ್‌ನಲ್ಲಿದ್ದ ರಕ್ತದ ಕಲೆಯು, ಕಾರಿನಲ್ಲಿ ಮೃತದೇಹ ಸಾಗಿಸಿರುವ ಬಗ್ಗೆ ಪೊಲೀಸರಿಗೆ ಸುಳಿವು ಕೊಟ್ಟಿದೆ.
ತನಿಖೆ ವೇಳೆ, ನನಗೇನೂ ಗೊತ್ತಿಲ್ಲ. ಕುರಿ ಸಾಗಿಸೋಕೆ ಅಂತಾ ಸ್ಕಾರ್ಪಿಯೋ ಕಾರು ಪಡೆದು ಹೀಗೆ ಹೆಣ ಸಾಗಿಸಿದ್ದಾರೆ ಎಂದು ಗೊತ್ತಿರಲಿಲ್ಲ ಅಂತಾ ಕಾರು ಮಾಲೀಕ ಪುನೀತ್ ಹೇಳಿಕೊಂಡಿದ್ದರು. ಆದರೆ, ಆತನಿಗೆ ಎಲ್ಲ ಮಾಹಿತಿ ಗೊತ್ತಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಸ್‌ಪಿಪಿ ವಾದದಲ್ಲಿ ಸ್ಪಷ್ಟತೆಯಿರಲಿಲ್ಲ, ಎಲ್ಲ ಆರೋಪ ದರ್ಶನ್ ಮೇಲೆ ಹೊರಿಸಲು ಸಾಧ್ಯವಿಲ್ಲ: ದರ್ಶನ್ ಪರ ವಕೀಲ
Advertisement
Advertisement
ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ನೀಡುವ ಮುನ್ನ ಕಾರಿನ ಮುಂಭಾಗ ಚಾಲೆಂಜಿಂಗ್ ಸ್ಟಾರ್… ಕಾರಿನ ಹಿಂಭಾಗದ ಗ್ಲಾಸ್ ಮೇಲೆ ದರ್ಶನ್ ಪೋಸ್ಟರ್‌ಗಳು, ಡಿ ಬಾಸ್ ಅಂತೆಲ್ಲಾ ಇತ್ತು. ಆದರೆ ಹೆಣ ಸಾಗಿಸಿದ ಬಳಿಕ ಮುಂದೆ ಸಿಕ್ಕಿ ಬೀಳಬಾರದು ಅಂತ ಪೋಸ್ಟರ್, ಡಿ ಬಾಸ್ ಅಂತ ಇದ್ದಿದ್ದನ್ನೆಲ್ಲಾ ತೆರವು ಮಾಡಲಾಗಿದೆ.
Advertisement
ಕಾಮಾಕ್ಷಿಪಾಳ್ಯದ ಮೋರಿ ಬಳಿ ರೇಣುಕಾಸ್ವಾಮಿ ಶವ ಎಸೆದ ಬಳಿಕ ಯಾವುದೇ ಗುರುತು ಸಿಗಬಾರದು ಎಂದು ಕಾರನ್ನು ವಾಶಿಂಗ್ ಸೆಂಟರ್‌ನಲ್ಲಿ ಹೇಮಂತ್ ತೊಳೆಸಿದ್ದಾನೆ. ಆದರೆ ಕಾರಿನ ಕಾರ್ಪೆಟ್‌ನಲ್ಲಿದ್ದ ರಕ್ತದ ಕಲೆಗಳು ಪತ್ತೆಯಾಗಿವೆ. ಈಗಾಗಲೇ ಎಫ್‌ಎಸ್‌ಎಲ್ ಟೀಂ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದಿದೆ. ಮತ್ತೊಂಡೆದೆ, ಎ7 ಅನುಕುಮಾರ್ ಜೊತೆ ಸ್ನೇಹಿತ ತಬಾರಕ್ ಎಂಬಾತ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಕೊಲೆ ಕೇಸ್‌ನಲ್ಲಿ ಬಂಧನ: ಹೃದಯಾಘಾತದಿಂದ ಸಾವನ್ನಪ್ಪಿದ್ದ ತಂದೆ ಅಂತ್ಯಕ್ರಿಯೆಗೆ ಹೊರಟ ಮಗ
Advertisement
‘ಸ್ವಾಮಿ ಕೊಲೆ ದಿನ ದೇವರಾಣೆ ನಾನು ಶೆಡ್ ಒಳಗೆ ಹೋಗಿಲ್ಲ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದೆವು. ನಮ್ಮನ್ನೆಲ್ಲಾ ಶೆಡ್‌ನಿಂದ ಹೊರಗೆ ನಿಲ್ಲಿಸಿದ್ದರು. ಕೆಲ ಹೊತ್ತಿನಲ್ಲಿ ಶೆಡ್ ಬಳಿಗೆ ನಟ ದರ್ಶನ್ ಕಾರು ಬಂದಿತ್ತು. ಗಂಟೆ ಬಳಿಕ ಶೆಡ್ ಬಳಿ ಕರೆದು ಸರೆಂಡರ್ ಆಗ್ತೀರಾ? ದುಡ್ಡು ಕೊಡ್ತೇವೆ ಅಂತಾ ಕೇಳಿದರು. ನಾವು ಸರೆಂಡರ್ ಆಗಲ್ಲ ಅಂತಾ ಹೇಳಿ ವಾಪಸ್ ಬಂದೆವು. ಶೆಡ್ ಒಳಗೆ ಸುಮಾರು 50 ಜನ ಇದ್ದರು’ ಎಂದು ಅನುಕುಮಾರ್ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.