ಬೆಂಗಳೂರು: ಭಾರತ ಸೇರಿದಂತೆ ವಿಶ್ವದ ಕೋಟ್ಯಂತರ ಜನ ನಭೋಮಂಡಲದ ಕೌತುಕ ಕಣ್ತುಂಬಿಕೊಂಡಿದ್ದಾರೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ 2ನೇ ರಕ್ತಚಂದ್ರ ಗ್ರಹಣ ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ರಾತ್ರಿ 9:57ರಿಂದ ಗ್ರಹಣ ಪ್ರಕ್ರಿಯೆ ಶುರುವಾಗಿದೆ. ಮೊದಲು ಬಿಳಿ ಬಣ್ಣದಲ್ಲಿ ಪೂರ್ಣಚಂದ್ರ ಗೋಚರವಾದ ಬಳಿಕ ಕಿತ್ತಳೆ, ಬಳಿಕ ಕೆಂಪು ವರ್ಣಕ್ಕೆ ತಿರುಗಿದ್ದಾನೆ. ಇಸ್ರೇಲ್, ಜಪಾನ್, ಕೀನ್ಯಾ, ನಮೀಬಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ರಕ್ತಚಂದ್ರನ ದರ್ಶನವಾಗಿದೆ. ಈ ಕುರಿತ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ…