ಅತ್ತ ಹುಣ್ಣಿಮೆ, ಇತ್ತ ಖಗ್ರಾಸ ಚಂದ್ರಗ್ರಹಣ – ಮಧ್ಯಾಹ್ನವೇ ಬಂದ್ ಆಗಲಿವೆ ಶನೇಶ್ವರ ದೇವಾಲಯಗಳು

Public TV
2 Min Read
Bloodmoon Shaneshwara Temple

– ಸೋಮವಾರ ಬೆಳಗ್ಗೆಯಿಂದ ವಿವಿಧ ದೋಷಗಳ ಪರಿಹಾರ ಪೂಜೆ

ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ. ಹುಣ್ಣಿಮೆ ರಾತ್ರಿಯಲ್ಲಿ ಕಂಗೊಳಿಸಬೇಕಿದ್ದ ಚಂದ್ರ ಇಂದು ಭೂಮಿಯ ಮರೆಯಲ್ಲಿ ಕೆಲಹೊತ್ತು ಮರೆಯಾಗಿ ಹೋಗುತ್ತಾನೆ. ಅತ್ತ ಕೌತುಕ ಕ್ಷಣಕ್ಕೆ ವಿಜ್ಞಾನ ಲೋಕ ಕಾದಿದ್ದರೆ, ಇತ್ತ ಧಾರ್ಮಿಕ ಕ್ಷೇತ್ರಗಳು ಚಂದ್ರಗ್ರಹಣ (Bloodmoon Eclipse 2025) ವೇಳೆಯ ಪೂಜೆ ಕಾರ್ಯಕ್ಕೆ ತಯಾರಿ ಮಾಡಿಕೊಂಡಿವೆ.

ಇಂದು ರಾತ್ರಿ ಆಗಸದಲ್ಲಿ ಸಂಭವಿಸುವ ಕೌತುಕ ಕ್ಷಣಕ್ಕಾಗಿ ಇಡೀ ವಿಜ್ಞಾನ ಕ್ಷೇತ್ರ ಕಾದು ಕುಳಿತಿದೆ. ಆದರೆ ಇತ್ತ ಧಾರ್ಮಿಕ ಕ್ಷೇತ್ರಗಳಲ್ಲಿ ಗ್ರಹಣ ಎಫೆಕ್ಟ್ ಹಿನ್ನೆಲೆ ಇಂದು ಮಧ್ಯಾಹ್ನದಿಂದಲೇ ದೇವರಿಗೆ ದರ್ಬೆ ಬಂಧನದ ಮೂಲಕ, ಪೂಜೆ ಪುನಸ್ಕಾರಕ್ಕೆ ಬ್ರೇಕ್ ಹಾಕಲಿವೆ. ಇದನ್ನೂ ಓದಿ: ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ

ಹೌದು, ಬೆಂಗಳೂರಿನ ಶನೇಶ್ವರ ಸ್ವಾಮಿ ದೇವಾಲಯಗಳು (Shaneshwara Temple) ಇಂದು ಮಧ್ಯಾಹ್ನವೇ ಚಂದ್ರಗ್ರಹಣ ಹಿನ್ನೆಲೆ ದೇವಾಲಯಗಳು ಬಂದ್ ಆಗಲಿವೆ. ಇಂದು ಹುಣ್ಣಿಮೆ ಆಗಿರುವ ಕಾರಣ, ಮಾಗಡಿ ರಸ್ತೆಯಲ್ಲಿರುವ ಶನೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜೆ ಕಾರ್ಯಗಳು ನಡೆಯಲಿವೆ. ಆದರೆ ಮಧ್ಯಾಹ್ನ 12 ಗಂಟೆಗೆ ದೇವರಿಗೆ ದರ್ಬೆ ಹಾಕಿ ಇಡೀ ದೇವಾಲಯವನ್ನ ಬಂದ್ ಮಾಡಲಿವೆ. ಈ ವೇಳೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರುವುದಿಲ್ಲ. ನಾಳೆ ಬೆಳಗ್ಗೆ ಮೂರು ಮೂವತ್ತಕ್ಕೆ ಅಂದರೆ ಗ್ರಹಣ ಮುಗಿದ ನಂತರ ದೇವಾಲಯ ಓಪನ್ ಮಾಡಿ, ದರ್ಬೆ ಬಂಧನ ಮುಕ್ತಿ ಗೊಳಿಸಿ ಇಡೀ ದೇವಾಲಯವನ್ನ ಶುಚಿ ಮಾಡುವ ಕೆಲಸ ಮಾಡಲಿದ್ದಾರೆ. ಇದನ್ನೂ ಓದಿ: ರಾಹುಗ್ರಸ್ತ ರಕ್ತ ಚಂದ್ರಗ್ರಹಣಕ್ಕೆ ಕ್ಷಣಗಣನೆ – ರಾಜ್ಯದ ಪ್ರಸಿದ್ಧ ದೇವಾಲಯಗಳು ಬಂದ್

ಆ ಬಳಿಕ 4:30ರ ನಂತರ ಪಂಚಾಮೃತ ಅಭಿಷೇಕ, ಕ್ಷೀರಭೀಷೇಕ, ತುಪ್ಪದ ಅಭಿಷೇಕ ಸೇರಿಂದತೆ ವಿವಿಧ ಅಭಿಷೇಕಗಳನ್ನ ನೆರವೇರಿಸಲಾಗುತ್ತದೆ. ನಂತರ ಗ್ರಹಣ ದೋಷ ಇರುವಂತವರಿಗಾಗಿಯೇ ಪರಿಹಾರ ಪೂಜೆಗಳಿಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಆಯಾಯಾ ದೋಷ ಇರುವಂತವರು ಕೂಡ ದೇವಾಲಯಗಳಲ್ಲಿ ಪೂಜೆಗಳನ್ನ ಬುಕ್ ಮಾಡಿದ್ದಾರೆ. ನಾಳೆ ಬೆಳಗ್ಗೆಯಿಂದಲೇ ಈ ಎಲ್ಲಾ ಪೂಜೆಗಳು ಆರಂಭವಾಗಲಿದೆ. ಈ ಬಗ್ಗೆ ದೇವಾಲಯದಲ್ಲೂ ಕೂಡ ನೋಟಿಸ್ ಹಾಕಲಾಗಿದೆ. ಇದನ್ನೂ ಓದಿ: ಸೆ.7 ರಕ್ತಚಂದ್ರಗ್ರಹಣ – ಗರ್ಭಿಣಿಯರು ಏನು ಮಾಡಬೇಕು? ತಜ್ಞ ವೈದ್ಯರ ಸಲಹೆಗಳೇನು?

ಇನ್ನೂ ಇದೇ ರೀತಿ ನವರಂಗ್ ಸರ್ಕಲ್ ಬಳಿಯ ಶನೇಶ್ವರ ದೇವಾಲಯದಲ್ಲೂ ತಯಾರಿ ಆಗಿದೆ. ಇಲ್ಲಿ ದೇವಾಲಯ ಬಂದ್ ಆಗದಿದ್ದರು ಭಕ್ತರಿಗೆ ದರ್ಶನ ಅವಕಾಶ ಇರುವುದಿಲ್ಲ. ಗ್ರಹಣ ವೇಳೆ ಪೂಜೆ ಮೂಲಕ ದೇವರ ಜಪ ಮಾಡಲಾಗುತ್ತೆ. ಆ ಬಳಿಕ ನಾಳೆ ಬೆಳಗ್ಗೆ ಗ್ರಹಣದ ನಂತರ ಇಲ್ಲೂ ಕೂಡ ದೇವಾಲಯ ಸ್ವಚ್ಚಮಾಡಿ ಆ ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಬಿಡಿಎ ಫ್ಲಾಟ್ / ವಿಲ್ಲಾ ಖರೀದಿಸಿ ನೋಂದಣಿಗಾಗಿ ಕಾಯುತ್ತಿರುವ ಹಂಚಿಕೆದಾರರಿಗೆ ಸುವರ್ಣಾವಕಾಶ

ಒಟ್ಟಾರೆ ಗ್ರಹಣದ ಹಿನ್ನೆಲೆ ದೇವಾಲಯಗಳಲ್ಲೂ ಧಾರ್ಮಿಕ ಪೂಜೆ ಕೈಕಂರ್ಯದ ತಯಾರಿ ಆಗಿದ್ದು, ಇಂದು ಮಧ್ಯಾಹ್ನದಿಂದಲೇ ಈ ಎಲ್ಲಾ ಕಾರ್ಯ ಆರಂಭವಾಗಲಿದೆ. ಇದನ್ನೂ ಓದಿ: ಚಾಮರಾಜನಗರ | ಲಾರಿ, ಕಾರು ಮೊಪೆಡ್ ನಡುವೆ ಸರಣಿ ಅಪಘಾತ – ನಾಲ್ವರು ಬಾಲಕರ ದುರ್ಮರಣ

Share This Article