ಚಿಕ್ಕಬಳ್ಳಾಪುರ: ಕಿಡಿಗೇಡಿಗಳು ದೇವಾಲಯದೊಳಗೆ ರಕ್ತ ಸುರಿದಿರುವ ಪ್ರಕರಣವೊಂದು ಚಿಕ್ಕಬಳ್ಳಾಪುರ (Chikkaballapur) ದಲ್ಲಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿರುವ ಬ್ಯಾಟರಾಯಸ್ವಾಮಿ (Byatarayaswamy Temple) ದೇವಾಲಯದೊಳಗೆ ರಕ್ತ ಸುರಿಯುವ ಮೂಲಕ ವಿಕೃತಿ ಮೆರೆಯಲಾಗಿದೆ. ದೇವರ ಗರ್ಭಗುಡಿಯವರೆಗೂ ರಕ್ತ ಹರದಿದ್ದು, ದೇವಾಲಯವೆಲ್ಲವೂ ರಕ್ತ ಸಿಕ್ತವಾಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
Advertisement
Advertisement
ಕಿಡಿಗೇಡಿಗಳ ಕೃತ್ಯಕ್ಕೆ ಮಳಮಾಚನಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಿಂತಿದ್ದ ಬಸ್ಗೆ ಟಿಟಿ ಡಿಕ್ಕಿ – ಇಬ್ಬರು ಸಾವು, ನಾಲ್ವರಿಗೆ ಗಾಯ
Advertisement