ಮಂಡ್ಯ: ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆಯಾಗದ ಬ್ಲಡ್ ಗ್ರೂಪ್‍ಗಳು ಅಂತ ಬಿಜೆಪಿ ಮುಖಂಡ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ನಾಗಮಂಗಲ ತಾಲೂಕಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಸಿದ್ದರಾಮಯ್ಯ ಪರ ಪ್ರಚಾರದಲ್ಲಿ ಭಾಗವಹಿಸಿ ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬ್ಲಡ್ ಗ್ರೂಪ್ ಬೇರೆ ಬೇರೆಯಾಗಿದ್ದು ಇವರ ರಕ್ತ ಅವರಿಗೆ, ಅವರ ರಕ್ತ ಇವರಿಗೆ ಕೊಟ್ಟರೆ ವಿಷ ಆಗುತ್ತದೆ. ಇದರಿಂದ ಮನುಷ್ಯ ಸಾಯುತ್ತಾನೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಶಿವರಾಮೇಗೌಡ ಅವರನ್ನು ಅಭ್ಯರ್ಥಿ ಮಾಡಿರುವುದನ್ನು ಮಂಡ್ಯ ಜನ ಒಪ್ಪುತ್ತಿಲ್ಲ. ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬ್ಲಡ್ ಗ್ರೂಪ್ ಬೇರೆ ಬೇರೆಯಾಗಿದ್ದು, ಇವರುಗಳು ರಕ್ತ ಕೊಟ್ಟರೆ ಅವು ವಿಷವಾಗುತ್ತದೆ. ಅಲ್ಲದೇ ಇದರಿಂದ ಮನುಷ್ಯ ಸಾಯುತ್ತಾನೆ ಅಂದ್ರು.
Advertisement
ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆಯಾಗದ ಬ್ಲಡ್ ಗ್ರೂಪ್‍ಗಳಾಗಿವೆ. ಬ್ಲಡ್ ಕೊಡಲು ದೇವೇಗೌಡರು ಸ್ಕೀಂ ಮಾಡಿದ್ದಾರೆ. ಅದರಿಂದ ಸಾಯೋದು ಕಾಂಗ್ರೆಸ್ ಪಕ್ಷ. ಹೀಗಾಗಿ ಈ ಹೊಂದಾಣಿಕೆಯ ಪಾಲಿಟಿಕ್ಸ್ ಉಳಿಯಲ್ಲ. ಈ ಮೂಲಕ ಮಂಡ್ಯದಲ್ಲಿ ಬಿಜೆಪಿಗೆ ಗೆಲುವಾಗುತ್ತದೆ ಎಂದು ಭವಿಷ್ಯ ನುಡಿದರು.
Advertisement
ಯಾರನ್ನೋ ಒಬ್ಬರನ್ನು ಸೋಲಿಸಲು ಬಿಜೆಪಿಗೆ ಬಂದಿದ್ದೆ. ಸೋಲಿಸಾಯ್ತು ವಾಪಸ್ ಹೋಗಿದ್ದೇನೆ ಎಂಬ ಶಿವರಾಮೇಗೌಡ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಅವರು, ಅವರ ಪ್ರಕಾರ ಅಂಬರೀಶ್ ಅವರನ್ನು ಸೋಲಿಸಾಯ್ತು ಅಂತ. ಅದೇ ರೀತಿ ರಮ್ಯಾ ಸೋಲಿಸಿದ್ದೇ ನಾನು ಅಂತ ಹೇಳಿದ್ದಾರೆ. ಹೀಗಾಗಿ ರಮ್ಯಾ, ಅಂಬರೀಶ್, ಚಲುವರಾಯಸ್ವಾಮಿ, ರೈತ ಸಂಘದ ಪುಟ್ಟಣ್ಣಯ್ಯ ಕುಟುಂಬ ಅವರ ವಿರುದ್ಧ ಇದೆ. ಇಡೀ ಜಿಲ್ಲೆಯೇ ಅವರ ವಿರುದ್ಧ ಇದೆ. ಹೀಗಾಗಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ ಅಂತ ತಿಳಿಸಿದ್ರು.
ಮಂಡ್ಯ ಕಾಂಗ್ರೆಸ್ ಮುಖಂಡರು ಅಶೋಕ್ ಅವರ ಸಂಪರ್ಕದಲ್ಲಿ ಇದ್ದಾರೆ ಎಂಬ ವಿಚಾರ ಸಂಬಂಧಿಸಿ ಮಾತನಾಡಿದ ಅವರು, ಇಡೀ ಮಂಡ್ಯ ಜನ ನಮ್ಮ ಜೊತೆ ಇದ್ದಾರೆ. ಕಾಂಗ್ರೆಸ್‍ನವರೂ ಇರಬಹುದು. ನೀವು ಹೇಳಿದವರೂ ಇರಬಹುದು. ಅದರಲ್ಲಿ ತಪ್ಪೇನಿದೆ ಅಂತ ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಅನ್ನೋದನ್ನು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv