ಹಾವೇರಿ: ಇತ್ತೀಚಿನ ದಿನಗಳಲ್ಲಿ ಬರ್ತ್ ಡೇ (Birthday) ಅಂದ್ರೆ ಕೇಕ್ ಕತ್ತರಿಸಿ ಸಂಭ್ರಮಿಸೋದು ಅಂತಾಗಿದೆ. ಆದರೆ ಇಲ್ಲೊಂದು ಬರ್ತ್ ಡೇ ಆಯ್ತು. ಇದು ಮನುಷ್ಯರ ಬರ್ತ್ ಡೇ ಅಲ್ಲ. ಇಲ್ಲೂ ಕೇಕ್ ಕತ್ತರಿಸಿ ಸಂಭ್ರಮಿಸಲಾಯ್ತು. ಕೇಕ್ ಕತ್ತರಿಸಿ ಸಂಭ್ರಮ ಅಚರಿಸೋದರ ಜೊತೆಗೆ ರಕ್ತದಾನ (Blood Donate) ಮಾಡಿ ಸಂಕಷ್ಟದಲ್ಲಿರೋ ಜನರ ಜೀವ ಉಳಿಸೋ ಕೆಲಸ ಮಾಡಲಾಯ್ತು.
Advertisement
ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದ ಸಿದ್ದಲಿಂಗೇಶ ವಾಲಿ ಎಂಬರಿಗೆ ಸೇರಿದ ರಾಕ್ಷಸ 220 ಹೋರಿಯನ್ನು ಸುಮಾರು 8 ವರ್ಷಗಳ ಹಿಂದೆ ಸಿದ್ದಲಿಂಗೇಶ ಅವರು 1 ಲಕ್ಷ ರೂಪಾಯಿ ಕೊಟ್ಟು ತಮಿಳುನಾಡಿನಿಂದ ಖರೀದಿಸಿ ತಂದಿದ್ರು. ಹೋರಿ (Bull) ಖರೀದಿಸಿ ತಂದ ಆರಂಭದಲ್ಲೇ ಹೋರಿ ಹಬ್ಬದ ಅಖಾಡದಲ್ಲಿ ದೊಡ್ಡ ಹೆಸರು ಮಾಡಿತು. ಅದ್ರಲ್ಲೂ ಹೋರಿ ಅಲಂಕಾರ ಮಾಡಿ ಕೊಬ್ಬರಿ ಹಾರ ಹಾಕಿ ಅಖಾಡದಲ್ಲಿ ಬಿಟ್ರೆ ಯಾರ ಕೈಗೂ ಸಿಗದಂತೆ ಥೇಟ್ ರಾಕ್ಷಸನ ಅವತಾರ ತಾಳಿದಂತೆ ಧೂಳೆಬ್ಬಿಸಿಕೊಂಡು ಓಡುತ್ತಿತ್ತು.
Advertisement
Advertisement
ಅಖಾಡದಿಂದ ಹೊರಗೆ ಬಂದ್ರೆ ಅತ್ಯಂತ ಮೃದು ಸ್ವಭಾವದ ಹೋರಿ ಎಲ್ಲರ ಅಚ್ಚುಮೆಚ್ಚು. ಶರವೇಗದ ಓಟದಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದುಕೊಂಡಿದೆ. ಹೀಗಾಗಿ ಹೋರಿಗೆ ಪ್ರತಿವರ್ಷ ಬರ್ತ್ ಡೇ ಆಚರಣೆ ಮಾಡಿಕೊಂಡು ಬರಲಾಗ್ತಿದೆ. ಹೋರಿಯ ಬರ್ತ್ ಡೇಗೆ ಬರೋ ಅಭಿಮಾನಿಗಳು 2 ವರ್ಷದಿಂದ ರಕ್ತದಾನ ಮಾಡ್ತಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ನೇತೃತ್ವದಲ್ಲಿ ಹೋರಿ ಮನೆಯವರು ರಕ್ತದಾನ ಶಿಬಿರ ಮಾಡ್ತಾರೆ. ಹೋರಿ ಹಬ್ಬಕ್ಕೆ ಬರೋ ನೂರಾರು ಅಭಿಮಾನಿಗಳಲ್ಲಿ ಹಲವರು ರಕ್ತದಾನ ಮಾಡ್ತಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್-ಸಿದ್ದು ರನ್ನಿಂಗ್ ರೇಸ್
Advertisement
ಕಳೆದ ವರ್ಷ 60ಕ್ಕಿಂತ ಅಧಿಕ ಜನರು ರಕ್ತದಾನ ಮಾಡಿದ್ರೆ, ಈ ವರ್ಷ ಈಗಾಗಲೆ 5್ತ0ಕ್ಕೂ ಅಧಿಕ ಜನರು ರಕ್ತದಾನ ಮಾಡಿದ್ದಾರೆ. ಈ ವರ್ಷ 5 ಕೆ.ಜಿ ಕೇಕ್ ತರಿಸಿ ಕೇಕ್ ಕತ್ತರಿಸಿ ಹೋರಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಲಾಯ್ತು. ಜೊತೆಗೆ ಹೋರಿ ಬರ್ತ್ ಡೇ ಗೆ ಬಂದ ಅಭಿಮಾನಿಗಳು ರಕ್ತದಾನ ಮಾಡಿ ಜೀವ ಉಳಿಸೋ ಕೆಲಸ ಮಾಡಿದ್ರು. ರಕ್ತದಾನ ಮಾಡದವರಿಗೆ ಹೋರಿ ಮನೆಯವರು ಜಿಲೇಬಿ, ಪಲಾವ್ ನ ಊಟ ಹಾಕಿದ್ರು.