ಮಂಡ್ಯ: ಪುಲ್ವಾಮಾ ದಾಳಿ ಘಟನೆ ನಡೆದು ಇಂದಿಗೆ 3 ವರ್ಷಗಳು ಕಳೆದಿವೆ. ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣಾರ್ಥದ ಹಿನ್ನೆಲೆ ಮಂಡ್ಯದಲ್ಲಿ ರಕ್ತದಾನ ಶಿಬಿರ ನಡೆಸಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಖಾಸಗಿ ಸಮುದಾಯ ಭವನದಲ್ಲಿ ಸೋಮವಾರ ಬೃಹತ್ ರಕ್ತದಾನ ಶಿಬಿರ ನೆರವೇರಿದೆ. ಪ್ರಗತಿಪರ ಸಂಘಟನೆ ಈ ಶಿಬಿರವನ್ನು ಆಯೋಜಿಸಿತ್ತು. ಇದನ್ನೂ ಓದಿ: ಹಿಜಬ್ ಗಲಾಟೆ ಬೆನ್ನಲ್ಲೇ ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿ
ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಯೋಧ ಗುರು ಸಮಾಧಿಗೆ ಪೂಜೆ ಸಲ್ಲಿಸಿ, ಅವರ ಪತ್ನಿ ಕಲಾವತಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಜನ ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು