– ಹಾರ್ಮುಜ್‌ನಲ್ಲಿ ಹಡುಗುಗಳಿಗೂ ಟೋಲ್ ವಿಧಿಸಲು ಮುಂದಾದ ಇರಾನ್
ಲಂಡನ್/ಟೆಹ್ರಾನ್: ಶತ್ರು ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ (Strait Of Hormuz) ಮುಚ್ಚುವುದು ಇರಾನ್‌ನ ಕಾನೂನುಬದ್ಧ ಹಕ್ಕು ಎಂದು ವಿಶ್ವಸಂಸ್ಥೆಯಲ್ಲಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ (Abbas Araghchi) ಪ್ರತಿಪಾದಿಸಿದ್ದಾರೆ.
From outset of this war, U.S. soldiers fled military bases in GCC to hide in hotels and offices. They use GCC citizens as human shield.
Hotels in U.S. deny bookings to officers who may endanger customers. GCC hotels should do same. pic.twitter.com/U2U4je0059
— Seyed Abbas Araghchi (@araghchi) March 26, 2026
ವಿಶ್ವಸಂಸ್ಥೆಯಲ್ಲಿ (UN) ಮಾತನಾಡಿದ ಅರಘ್ಚಿ, ಹಾರ್ಮುಜ್ ಜಲಸಂಧಿಯಲ್ಲಿ ಅಭದ್ರತೆ ಕಾಡಲು ಅಮೆರಿಕ ಮತ್ತು ಇಸ್ರೇಲ್‌ನ ಕಾನೂನು ಉಲ್ಲಂಘನೆ ಮತ್ತು ಆಕ್ರಮಣಶೀಲತೆಯೆ ಕಾರಣ. ಹಾಗಾಗಿಯೇ ಇರಾನ್‌ನ (Iran) ಅಧಿಕಾರಿಗಳು ಜಲಮಾರ್ಗದಲ್ಲಿ ಭದ್ರತೆಯನ್ನ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಅಲ್ಲದೇ ಶತ್ರು ರಾಷ್ಟ್ರಗಳಿಗೆ ಜಲಮಾರ್ಗ ಮುಚ್ಚುವುದು ಮತ್ತು ಮಿತ್ರರಾಷ್ಟ್ರಗಳಿಗೆ ತೆರೆಯುವುದು ಇರಾನ್‌ನ ಕಾನೂನುಬದ್ಧ ಹಕ್ಕಾಗಿದೆ ಎಂದು ಅರಘ್ಚಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್‌ಗೆ ತಿಳಿಸಿದ್ದಾರೆ.

ಅಮೆರಿಕದ ಪಡೆಗಳು ಗಲ್ಫ್ ಸಹಕಾರ ಮಂಡಳಿ (JCC) ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ. ಇರಾನ್ ತನ್ನ ಮಿಲಿಟರಿ ನೆಲೆಗಳ ಮೇಲೆ ದಾಳಿ ಆರಂಭಿಸುತ್ತಿದ್ದಂತೆ ಅಮೆರಿಕ ಸೇನೆಯ ಅಧಿಕಾರಿಗಳು ಮಿಲಿಟರಿ ನೆಲೆಗಳಿಂದ ಪಲಾಯನ ಮಾಡಿ, ಹೋಟೆಲ್‌ಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅದಕ್ಕೆ ಪೂರಕವಾದ ಹೋಟೆಲ್ ಬುಕಿಂಗ್ ರಶೀದಿಗಳನ್ನೂ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮುಂದುವರಿದು.. ಗಲ್ಫ್ ರಾಷ್ಟ್ರಗಳಲ್ಲಿರುವ ಹೋಟೆಲ್‌ಗಳು ಪಲಾಯನ ಮಾಡಿ ಬರುವ ಅಮೆರಿಕದ ಅಧಿಕಾರಿಗಳಿಗೆ ಹೋಟೆಲ್ ರೂಮ್‌ಗಳನ್ನ ನಿರಾಕರಿಸಬೇಕು. ಏಕೆಂದ್ರೆ ಅವರ ಉಪಸ್ಥಿತಿಯು ಅಲ್ಲಿನ ನಾಗರಿಕರಿಗೆ ಅಪಾಯ ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.

ಹಡಗುಗಳಿಗೆ ಟೋಲ್ ವಿಧಿಸಲು ಇರಾನ್ ಪ್ಲ್ಯಾನ್
ಇರಾನ್ ಸಂಸತ್ತು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಭದ್ರತೆ ಮತ್ತು ಮೇಲ್ವಿಚಾರಣೆಗಾಗಿ ಶುಲ್ಕ (Hormuz Toll) ವಿಧಿಸುವ ಮಸೂದೆಯನ್ನ ರಚಿಸಲು ಮುಂದಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಕರಡನ್ನು ಮುಂದಿನ ವಾರದ ಆರಂಭದಲ್ಲಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಈ ಪ್ರಸ್ತಾವನೆಯು ಇರಾನ್‌ನ ಸಾರ್ವಭೌಮತ್ವವನ್ನ ಔಪಚಾರಿಕವಾಗಿ ಗುರುತಿಸುವುದು ಮತ್ತು ಟೋಲ್‌ಗಳ ಮೂಲಕ ಆದಾಯ ಗಳಿಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.

