ಉಡುಪಿ: ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದ ಗೆದ್ದ ಭಾರತ (Team India) ತಂಡದ ಆಟಗಾರ್ತಿಯರು ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ (Udupi Shri Krishna Temple) ಭೇಟಿ ನೀಡಿದರು.
ಮಠದ ಆಡಳಿತವು ವಿಜೇತ ತಂಡವನ್ನು ಸಂಭ್ರಮದಿಂದ ಬರಮಾಡಿಕೊಂಡಿತು. ಕನಕನ ಕಿಂಡಿಯ ಮೂಲಕ ಕೃಷ್ಣದೇವರಿಗೆ ಕ್ರೀಡಾಪಟುಗಳು ಕೈಮುಗಿದರು. ಪರ್ಯಾಯ ಶ್ರೀ ಶಿರೂರು ಮಠದ ವೇದವರ್ಧನ ತೀರ್ಥರಿಂದ ಗೌರವಾರ್ಪಣೆ ಮಾಡಲಾಯಿತು. ವಿಶ್ವಕಪ್‌ನಲ್ಲಿ ಸಾಧನೆ ತೋರಿದ ವನಿತೆಯರನ್ನು ಶ್ರೀಗಳು ಅಭಿನಂದಿಸಿದರು. ಇದನ್ನೂ ಓದಿ: PublicTV Explainer: ಕ್ರಿಕೆಟ್ ಅಕಾಡೆಮಿಗಳ ಗೇಮ್ ಚೇಂಜರ್ ಲೆದರೆಟ್ ಬಾಲ್!
ಈ ವೇಳೆ ವಿಜೇತ ತಂಡ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿತು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ತಂಡದ ಸದಸ್ಯೆಯರ ಜೊತೆ ಸಮಾಲೋಚನೆ ನಡೆಸಿದರು. ಕೃಷ್ಣಮಠದಲ್ಲಿ ಪ್ರಸಾದ ಸ್ವೀಕರಿಸಿ ಆಟಗಾರ್ತಿಯರು ತೆರಳಿದರು. ನಾಳೆ ನಡೆಯಲಿರುವ ಮಣಿಪಾಲ್ ಮ್ಯಾರಥಾನ್‌ನಲ್ಲಿ ಭಾಗಿಯಾಗಲಿದ್ದಾರೆ.

