ತುಮಕೂರು: ತಮ್ಮ ಸುಮಧುರ ಕಂಠದಿಂದ ಸರಿಗಮಪ (Saregamapa) ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಡೀ ರಾಜ್ಯದ ಜನರ ಮನೆಮಾತಾಗಿದ್ದ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಜಮ್ಮ (Manjamma) ಇಂದು (ಜ.28) ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hosi ಕೊನೆಯುಸಿರೆಳೆದಿದ್ದಾರೆ.ಇದನ್ನೂ ಓದಿ: ಫೈನಾನ್ಸ್ ಕಿರುಕುಳ: 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ – ಗುರುವಾರ ಸರ್ಕಾರದಿಂದ ಸುಗ್ರೀವಾಜ್ಞೆ
ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ನಿವಾಸಿ ಮಂಜಮ್ಮ ಹಾಗೂ ತಂಗಿ ರತ್ನಮ್ಮ ಹುಟ್ಟು ಅಂಧರು. ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಹಾಡು ಹಾಡಿ ಭಕ್ತಾದಿಗಳು ಕೊಟ್ಟ ಹಣದಿಂದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಇವರ ಪ್ರತಿಭೆ ಗುರುತಿಸಿ ಝೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿತ್ತು. ಆ ಮುಖೇನ ಕರ್ನಾಟಕದ ಜನರ ಮನೆ ಮಾತಾಗಿದ್ದರು.
2019ರಲ್ಲಿ ನಟ ಜಗ್ಗೇಶ್ ತಮ್ಮ ಸ್ವಂತ ಹಣದಿಂದ ಅವರಿಗಾಗಿ ಮನೆಯ ನಿರ್ಮಾಣ ಮಾಡಿಕೊಟ್ಟಿದ್ದರು. ಇನ್ನೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮಂಜಮ್ಮ ಹಾಗೂ ರತ್ನಮ್ಮ ಅವರಿಗೆ ಪ್ರತಿ ತಿಂಗಳು ಆಹಾರ ಪದಾರ್ಥಗಳನ್ನು ಕಳುಹಿಸಿಕೊಡುವ ಮೂಲಕ ನೆರವಾಗಿದ್ದರು.ಇದನ್ನೂ ಓದಿ: PUBLiC TV Impact | ಹಾಲಿಗೆ ನೀರು ಕಲಬೆರಕೆ ಮಾಡಿರೋದು ತನಿಖೆಯಲ್ಲಿ ಧೃಢ – ಸಿಬ್ಬಂದಿ, ಅಧಿಕಾರಿಗಳು ವಜಾ