ಬೆಂಗಳೂರು: ಸಹಾಯ ಕೇಳಿ ಬಂದ ದಿವ್ಯಾಂಗನ ಮೇಲೆ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ದೌರ್ಜನ್ಯವೆಸಗಿದ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ ವಿಧಾನಸೌಧ ಮೂರನೇ ಮಹಡಿ ಲಿಫ್ಟ್ ಬಳಿ ಶನಿವಾರ ರಾತ್ರಿ ನಡೆದಿದೆ. ಬೀದರ್ ಮೂಲದ ದಿವ್ಯಾಂಗ ಮಂಜುನಾಥ ಎಂಬವರೇ ದೌರ್ಜನ್ಯಕ್ಕೊಳಗಾದ ವ್ಯಕ್ತಿ.
ಸಚಿವ ಸಂಪುಟ ಸಭೆಯ ಬಳಿಕ ಮಂಜುನಾಥ ಅವರು ಸಹಾಯಹಸ್ತ ಕೋರಿ ಸಚಿವರ ಬೆನ್ನತ್ತಿದರು. ಆದ್ರೆ ದಿವ್ಯಾಂಗನ ಅಳಲಿಗೆ ಕಿವಿಗೊಡದ ಸಚಿವರು ಕೈ ತೆಗಿಯೋ ಎಂದು ಗದರಿಸಿದ್ರು. ಅಲ್ಲದೇ ಸಚಿವರ ಅಂಗರಕ್ಷಕರು ಕೂಡ ಕಣ್ಣಿದ್ದವರೇ ಮನೆ ಸೇರೋದು ಕಷ್ಟ. ಇನ್ನು ನೀನೇನೋ ಮನೆ ಸೇರ್ತಿಯಾ ರಾತ್ರಿಯಾಗಿದೆ. ಹಗಲಿನಲ್ಲಿ ಬರಬೇಕು ತಾನೇ ಎಂದು ಗದರಿಸಿ ಲಿಫ್ಟ್ ಒಳಗಿಂದ ಹೊರದೂಡಿದ್ದಾರೆ.
ಕಣ್ಣಿಲ್ಲದಿದ್ದರೂ ಸಚಿವರನ್ನು ಬೆನ್ನತ್ತಿ ಹೋದ್ರೂ ಕ್ಯಾರೆ ಎನ್ನದ ಕಾರಣ ಮಂಜುನಾಥ್ ಪರದಾಟ ನಡೆಸಿದ್ರು. ಕೊನೆಗೆ ಸಚಿವ ಎಂ.ಬಿ.ಪಾಟೀಲ್ ದಿವ್ಯಾಂಗನಿಗೆ ಸ್ಪಂದಿಸಿ, ಅವರ ಮನವಿ ಸ್ವೀಕರಿಸಿದ್ರು.
https://www.youtube.com/watch?v=fTDVjsijZ_A