ಬಾಲಿವುಡ್ (Bollywood) ನಟಿ ಸೋನಂ ಕಪೂರ್ ತಮ್ಮ ಚಿತ್ರದ ನಿರ್ಮಾಪಕರ ಮೇಲೆ ಬೇಸರಿಸಿಕೊಂಡಿದ್ದಾರೆ. ತಾವು ಅತೀ ನಿರೀಕ್ಷೆ ಮಾಡುತ್ತಿದ್ದ ‘ಬ್ಲೈಂಡ್’ (Blind) ಸಿನಿಮಾವನ್ನು ನಿರ್ಮಾಪಕರು ಏಕಾಏಕಿ ಓಟಿಟಿಯಲ್ಲಿ (OTT) ನೇರವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ಸಹಜವಾಗಿಯೇ ನಟಿಗೆ ಬೇಸರವಾಗಿದೆ. ಚಿತ್ರಮಂದಿರಗಳಲ್ಲಿ ನೋಡಬೇಕಾದ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Advertisement
ಮದುವೆ ಮತ್ತು ಮಗುವಾದ ನಂತರ ಸೋನಂ ಕಪೂರ್ (Sonam Kapoor) ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಭರವಸೆ ಮೂಡಿಸಬಲ್ಲ ಚಿತ್ರಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ಚಿತ್ರಗಳು ಮೊದಲು ಥಿಯೇಟರ್ ನಲ್ಲಿ ಬರಲಿ, ಆನಂತರ ಓಟಿಟಿಯಲ್ಲಿ ಪ್ರಸಾರ ಕಾಣಲಿ ಎನ್ನುವುದು ಅವರ ಆಸೆ. ಆದರೆ, ಬ್ಲೈಂಡ್ ಸಿನಿಮಾದ ನಿರ್ಮಾಪಕರು ಆ ಆಸೆಗೆ ತಣ್ಣೀರು ಎರೆಚಿದ್ದಾರೆ ಎನ್ನುವುದು ಅವರ ನೋವು. ಇದನ್ನೂ ಓದಿ:Bigg Boss OTT 2: ದೊಡ್ಮನೆಯಿಂದ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಔಟ್
Advertisement
Advertisement
ಮದುವೆ ಮತ್ತು ಮಗುವಾದ ನಂತರ ನಾಲ್ಕು ವರ್ಷಗಳಿಂದ ಸೋನಂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಾಲ್ಕು ವರ್ಷಗಳ ನಂತರ ಬರುತ್ತಿರುವ ಸಿನಿಮಾವಿದು. ದೊಡ್ಡ ಮಟ್ಟದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುತ್ತಾರೆ ಎಂದು ನಂಬಿಕೊಂಡಿದ್ದೆ. ಓಟಿಟಿಯಲ್ಲಿ ಬರುತ್ತಿರುವ ವಿಚಾರವನ್ನೂ ನಿರ್ಮಾಪಕರು ನನ್ನ ಬಳಿ ಹೇಳಲಿಲ್ಲ ಎಂದು ಸೋನಂ ಅವರ ಆಪ್ತರ ಬಳಿ ನೋವನ್ನು ಹಂಚಿಕೊಂಡಿದ್ದಾರೆ.
Advertisement
ಹಾಗಂತ ಬ್ಲೈಂಡ್ ನೇರ ಸಿನಿಮಾ ಏನೂ ಅಲ್ಲ. 2011ರಲ್ಲಿ ಬಿಡುಗಡೆಯಾದ ಕೊರಿಯನ್ (Korean) ಭಾಷೆಯ ಬ್ಲೈಂಡ್ ಚಿತ್ರದ ರಿಮೇಕ್. ಹಾಗಾಗಿಯೇ ನಿರ್ಮಾಪಕರು ಇಂಥದ್ದೊಂದು ಆಲೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ನಡೆ ಸೋನಂಗೆ ಮತ್ತು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.
Web Stories